BBK11: ಜಗದೀಶ್ ಹೊರಹಾಕಿ ಗಂಡ್ಮಕ್ಳ ಕೆಂಗಣ್ಣಿಗೆ ಗುರಿಯಾದ ಬಿಗ್ ಬಾಸ್

Krishnaveni K
ಶುಕ್ರವಾರ, 18 ಅಕ್ಟೋಬರ್ 2024 (13:47 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಮಹಿಳಾ ಸ್ಪರ್ಧಿ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ತಪ್ಪಿಗೆ ಸ್ಪರ್ಧಿ ಜಗದೀಶ್ ಮತ್ತು ಅವರ ಜೊತೆ ತಳ್ಳಾಟ ನಡೆಸಿದ ರಂಜಿತ್ ರನ್ನು ಹೊರಹಾಕಲಾಗಿದೆ. ಇದರ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ವಿಶೇಷವಾಗಿ ಸದಾ ಕಿರಿಕ್ ಗಳಿಂದಲೇ ಮನರಂಜನೆ ಒದಗಿಸುತ್ತಿದ್ದ ಜಗದೀಶ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ಜಗದೀಶ್ ಸಿಂಹ, ಉಳಿದೆಲ್ಲಾ ತೋಳಗಳ ಜೊತೆ ಹೋರಾಡಿದ ಏಕಾಂಗಿ ಸಿಂಹ ಎಂದೆಲ್ಲಾ ಅವರ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಆದರೆ ಜಗದೀಶ್ ಹೊರಹಾಕಲು ಹೆಣ್ಮಕ್ಳ ಬಗ್ಗೆ ಕೆಟ್ಟ ಪದ ಬಳಕೆ ಮಾಡಿದ ಕಾರಣ ನೀಡಿದ್ದ ಬಿಗ್ ಬಾಸ್ ಈಗ ಗಂಡ್ಮಕ್ಳ ಕೆಂಗಣ್ಣಿಗೆ ಗುರಿಯಾಗಿದೆ. ಜಗದೀಶ್ ವಿರುದ್ಧ ಮಾನಸಾ ಮತ್ತು ಇತರೆ ಹೆಣ್ಮಕ್ಳು ಹೋಗಲೋ ಎಂದು ಅಸಭ್ಯವಾಗಿ ಮಾತನಾಡಿದ್ದರು. ಹಾಗಿದ್ದರೆ ಮರ್ಯಾದೆ ಎನ್ನುವುದು ಕೇವಲ ಹೆಣ್ಣು ಮಕ್ಕಳಿಗೆ ಮಾತ್ರವಾ, ಗಂಡು ಮಕ್ಕಳ ಮರ್ಯಾದೆಗೆ ಬೆಲೆ ಇಲ್ವಾ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಹೆಣ್ಣು ಮಕ್ಕಳಿಗೆ ಅವಮಾನ ಮಾಡಿದ್ದಾರೆಂದು ಜಗದೀಶ್ ರನ್ನು ಹೊರಹಾಕುತ್ತಾರೆ ಎಂದಾದರೆ ಗಂಡು ಮಕ್ಕಳಿಗೆ ಅವಮಾನ ಮಾಡಿದ್ದಕ್ಕೆ ಮಾನಸಾ, ಭವ್ಯಾ ಮುಂತಾದವರನ್ನೂ ಹೊರಹಾಕಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಬರುತ್ತಿದೆ. ಇದೀಗ ಬಿಗ್ ಬಾಸ್ ನ ಇಂದಿನ ಸಂಚಿಕೆ ನೋಡಲು ಜನ ಕುತೂಹಲದಿಂದ ಕಾಯುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಚಾಪ್ಟರ್ 1 ಒಂದು ವಾರದಲ್ಲಿ ಗಳಿಸಿದ್ದು ಎಷ್ಟು

ಬಿಗ್ ಬಾಸ್ ರಾತ್ರೋ ರಾತ್ರಿ ತೆರೆಯಲು ಕಿಚ್ಚ ಸುದೀಪ್ ಕರೆ ಮಾಡಿದ್ದು ಯಾರಿಗೆ

ಅ‍ಪಘಾತದಲ್ಲಿ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿ ಪಂಜಾಬಿ ಗಾಯಕ ರಾಜವೀರ್ ಜವಾಂಡ ನಿಧನ

ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಜಾವೇದ್ ಹಬೀಬ್, ಆತನ ಮಗನ ವಿರುದ್ಧ 23 ಪ್ರಕರಣ, ಲುಕ್‌ ಔಟ್ ನೋಟಿಸ್ ಜಾರಿ

ದರ್ಶನ್ ಜೈಲು ಸೇರಿದ ಬೆನ್ನಲ್ಲೇ ಫಾರ್ಮ್ ಹೌಸ್ ನ ಕುದುರೆಗಳ ಮಾರಾಟ

ಮುಂದಿನ ಸುದ್ದಿ
Show comments