Webdunia - Bharat's app for daily news and videos

Install App

ಕನ್ನಡ ಚಿತ್ರರಂಗ ಅಷ್ಟೊಂದು ಕೆಟ್ಟು ಹೋಗಿಲ್ಲ: ಮೀಟೂ ಆರೋಪಗಳಿಗೆ ನಟಿ ತಾರಾ ಖಡಕ್ ಪ್ರತಿಕ್ರಿಯೆ

Krishnaveni K
ಶುಕ್ರವಾರ, 6 ಸೆಪ್ಟಂಬರ್ 2024 (14:57 IST)
Photo Credit: Instagram
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಸಮಿತಿ ರಚಿಸಿ ತನಿಖೆ ನಡೆಸುವಂತೆ ನಿನ್ನೆ ಫೈರ್ ಸಂಸ್ಥೆ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡಿತ್ತು.

ಈ ನಡುವೆ ಹಿರಿಯ ನಟಿ ತಾರಾ ಅನುರಾಧ ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಅನಿಸುವ ಪ್ರಕಾರ ಕನ್ನಡ ಚಿತ್ರರಂಗ ಅಷ್ಟೊಂದು ಕೆಟ್ಟು ಹೋಗಿಲ್ಲ. ಇಲ್ಲಿ ಅಂತಹ ಪ್ರಕರಣಗಳು ಕಡಿಮೆ ಎನ್ನುವುದು ನನ್ನ ಅಭಿಪ್ರಾಯ ಎಂದು ತಾರಾ ಅನುರಾಧ ಹೇಳಿದ್ದಾರೆ.

ಹಾಗಂತ ಇದೀಗ ಸಮಿತಿ ರಚಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದು ತಪ್ಪು ಅಂತ ನಾನು ಹೇಳಲ್ಲ ಎಂದೂ ಹೇಳಿದ್ದಾರೆ. ಯಾವುದೇ ರಂಗದಲ್ಲಾದರೂ ಲೈಂಗಿಕ ಕಿರುಕುಳ ಸಮಸ್ಯೆ ಇದ್ದೇ ಇರುತ್ತದೆ. ಅಂತಹ ಘಟನೆಗಳು ಆಗಬಾರದು. ತನಿಖೆ ನಡೆಸುವುದು ತಪ್ಪೇನಲ್ಲ. ಆದರೆ ಕನ್ನಡ ಚಿತ್ರರಂಗದ ಅಷ್ಟೊಂದು ಕೆಟ್ಟತನವಿಲ್ಲ. ಇಲ್ಲಿ ಎಲ್ಲರ ನಡುವಿನ ಬಾಂಧವ್ಯ ಚೆನ್ನಾಗಿದೆ ಎಂದು ತಾರಾ ಹೇಳಿದ್ದಾರೆ.

ನಿನ್ನೆಯಷ್ಟೇ ನಟ ಚೇತನ್ ಅಹಿಂಸಾ, ಸಾಮಾಜಿಕ ಕಾರ್ಯಕರ್ತೆ ವಿಜಯಮ್ಮ, ನಟಿಯರಾದ ಶ್ರುತಿ ಹರಿಹರನ್, ನೀತೂ, ಸಂಜನಾ ಗಲ್ರಾನಿ ಸೇರಿದಂತೆ ಹಲವರು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿ ವಿಶೇಷ ಸಮಿತಿ ರಚಿಸಿ ತನಿಖೆ ನಡೆಸುವಂತೆ ಮನವಿ ಮಾಡಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಾನು ಸ್ವಲ್ಪ ಸ್ಲೋ ಎನಿಸಬಹುದು ಆದ್ರೆ.. ರಕ್ಷಿತ್ ಶೆಟ್ಟಿ ಹೇಳಿದ ಮಾತು ನೋಡಿ video

₹69ಕೋಟಿ ವಂಚನೆ ಬೆನ್ನಲ್ಲೇ ನಟಿ ಶಿಲ್ಪಾ ಶೆಟ್ಟಿ ಮಾಲೀಕತ್ವದ ರೆಸ್ಟೋರೆಂಟ್‌ ಇದೇನಾಯಿತು

ಹ್ರಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಹೃದಯವಂತಿಕೆಗೆ ಮನಸೋತ ಪವನ್ ಕಲ್ಯಾಣ್

ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ಭಾರತಿ ವಿಷ್ಣುವರ್ಧನ್ ಹೇಳಿದ್ದೇನು

ಸಾನ್ವಿ ಸುದೀಪ್ ಬಾಯಲ್ಲಿ ತಪ್ಪಿಯೂ ಕನ್ನಡ ಇಲ್ಲ: ಟ್ರೋಲ್ ಆದ ಕಿಚ್ಚನ ಮಗಳ ಸಂದರ್ಶನ

ಮುಂದಿನ ಸುದ್ದಿ