Select Your Language

Notifications

webdunia
webdunia
webdunia
webdunia

ಬಾಲ್ಯದ ಕಹಿ ಅನುಭವ ಬಿಚ್ಚಿಟ್ಟ ನಟಿ: ರಿಯಾಲಿಟಿ ಶೋನಲ್ಲಿ ನಟಿ ವರಲಕ್ಷ್ಮಿ ಕಣ್ಣೀರಿಟ್ಟಿದ್ದು ಏಕೆ

Veteran actor Sarath Kumar, dance duo dance reality show, multilingual actress Varalakshmi

Sampriya

ಬೆಂಗಳೂರು , ಭಾನುವಾರ, 23 ಮಾರ್ಚ್ 2025 (15:13 IST)
Photo Courtesy X
ಬೆಂಗಳೂರು: ಬಹುಭಾಷಾ ಹಿರಿಯ ನಟ ಶರತ್‌ ಕುಮಾರ್‌ ಅವರ ಪುತ್ರಿ, ಕನ್ನಡದ ಮಾಣಿಕ್ಯ ಬೆಡಗಿ ವರಲಕ್ಷ್ಮಿ ಹಲವು ಸಿನಿಮಾಗಳಲ್ಲಿ ಬಣ್ಣ ಹೆಚ್ಚಿದ್ದಾರೆ. ಇದೀಗ ಅವರು ‌‌ತೆಲುಗಿನ  ಡ್ಯಾನ್ಸ್ ಜೋಡಿ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಪಾಲ್ಗೊಳ್ಳುತ್ತಿದ್ದಾರೆ.

ರಿಯಾಲಿಟಿ ಶೋ ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ವರಲಕ್ಷ್ಮಿ ಶರತ್‌ಕುಮಾರ್ ತಮಗಾದ ಲೈಂಗಿಕ ಕಿರುಕುಳ ನೆನೆದು ಕಾರ್ಯಕ್ರಮವೊಂದರಲ್ಲಿ ಕಣ್ಣೀರಿಟ್ಟಿದ್ದಾರೆ. ನಿಮ್ಮ ಮಕ್ಕಳಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗ್ಗೆ ಅರಿವು ಮೂಡಿಸಿ ಎಂದು ಪರಿಪರಿಯಾಗಿ ಮನವಿ ಮಾಡಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ಉದ್ಯಮಿ ನಿಕೋಲಾಯ್ ಜೊತೆ ನಟಿ ವರಲಕ್ಷ್ಮಿ ಹೊಸ ಬಾಳಿಗೆ ಕಾಲಿಟ್ಟರು. ವಿದೇಶದಲ್ಲಿ ಇಬ್ಬರ ಮದುವೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ಡ್ಯಾನ್ಸ್ ಜೋಡಿ ಡ್ಯಾನ್ಸ್ ರಿಯಾಲಿಟಿ ಶೋದ ಪ್ರೋಮೋ ರಿಲೀಸ್ ಆಗಿದೆ. ಆ ಪ್ರೋಮೋದಲ್ಲಿ ಮಹಿಳಾ ಸ್ಪರ್ಧಿಯೊಬ್ಬರು ತಾವು ಎದುರಿಸಿದ ಕಹಿ ಅನುಭವಗಳ ಬಗ್ಗೆ ಡ್ಯಾನ್ಸ್ ಮೂಲಕ ತೋರಿಸಿದ್ದಾರೆ. ಇದನ್ನು ನೋಡಿ ವರಲಕ್ಷ್ಮಿ ಭಾವುಕರಾಗಿದ್ದಾರೆ.

ನಾನು ಕೂಡ ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ, ನನ್ನ ಕಥೆಯೂ ನಿನ್ನ ಕಥೆಯೂ ಒಂದೇ ಎಂದಿದ್ದಾರೆ ನಟಿ. ಪೋಷಕರು ಅವರ ಕೆಲಸದಲ್ಲಿ ನಿರತರಾಗಿದ್ದರು. ಹಾಗಾಗಿ ನಾನು ಚಿಕ್ಕವಳಿದ್ದಾಗ ನನ್ನನ್ನು ಬೇರೆಯವರ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದರು. ಆಗ 5ರಿಂದ 6 ಜನ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು ಎಂದು ಹೇಳಿಕೊಂಡಿದ್ದಾರೆ.

ನಿನ್ನ ಸ್ಟೋರಿ ನನ್ನ ಸ್ಟೋರಿ ಎರಡು ಒಂದೆ. ನನಗೆ ಮಕ್ಕಳಿಲ್ಲ ಆದರೆ ನಾನು ಪೋಷಕರಿಗೆ ಹೇಳುವುದಿಷ್ಟೇ, ನಿಮ್ಮ ಮಕ್ಕಳಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗ್ಗೆ ಅರಿವು ಮೂಡಿಸಿ ಎಂದು ವೇದಿಕೆಯಲ್ಲಿ ವರಲಕ್ಷ್ಮಿ ಕಣ್ಣೀರಿಟ್ಟಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ್‌ ಸಿಂಗ್‌ ಆತ್ಮಹತ್ಯೆ ಕೇಸ್‌ನಲ್ಲಿ ನಟಿ ರಿಯಾ ಚಕ್ರವರ್ತಿಗೆ ಕ್ಲೀನ್‌ಚಿಟ್‌ ನೀಡಿದ ಸಿಬಿಐ