Select Your Language

Notifications

webdunia
webdunia
webdunia
webdunia

ವಿನಯ್ ರಾಜ್ ಕುಮಾರ್ ಜೊತೆಗಿನ ಸಂಬಂಧವೇನು ಎಂದು ಓಪನ್ ಆಗಿ ಹೇಳಿದ ರಮ್ಯಾ

Ramya-Vinay Rajkumar

Krishnaveni K

ಬೆಂಗಳೂರು , ಗುರುವಾರ, 11 ಸೆಪ್ಟಂಬರ್ 2025 (09:49 IST)
ಬೆಂಗಳೂರು: ನಟಿ ರಮ್ಯಾ ದೊಡ್ಮನೆ ಹುಡುಗ ವಿನಯ್ ರಾಜ್ ಕುಮಾರ್ ಜೊತೆ ಕೈ ಕೈ ಹಿಡಿದುಕೊಂಡು ಅಮೆರಿಕಾದಲ್ಲಿ ವಾಕಿಂಗ್ ಮಾಡುವ ಫೋಟೋಗಳು ವೈರಲ್ ಆಗಿದ್ದವು. ಇದೀಗ ತಮ್ಮ ಮತ್ತು ವಿನಯ್ ನಡುವಿನ ಸಂಬಂಧವೇನು ಎಂಬ ಬಗ್ಗೆ ರಮ್ಯಾ ಸ್ಪಷ್ಟನೆ ನೀಡಿದ್ದಾರೆ.

ರಮ್ಯಾ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ನಿನ್ನೆ ವಿನಯ್ ರಾಜ್ ಕುಮಾರ್ ಮತ್ತು ಪುನೀತ್ ಮಗಳು ವಂದಿತಾ ಜೊತೆ ಅಮೆರಿಕಾದಲ್ಲಿ ಸುತ್ತಾಡುತ್ತಿರುವ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದರು. ಇದರಲ್ಲಿ ವಿನಯ್ ಮತ್ತು ರಮ್ಯಾ ಕ್ಲೋಸ್ ಆಗಿರುವ ಫೋಟೋಗಳು ಎಲ್ಲರ ಗಮನ ಸೆಳೆದಿತ್ತು.

ಕೆಲವು ದಿನಗಳ ಹಿಂದೆ  ವಿನಯ್ ಜೊತೆ ರಮ್ಯಾ ಫೋಟೋ ಶೂಟ್ ಕೂಡಾ ಮಾಡಿಸಿಕೊಂಡಿದ್ದರು. ಇದೇ ಕಾರಣಕ್ಕೆ ಅವರ ಪೋಸ್ಟ್ ಗೆ ಹಲವರು ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರಾ ಎಂದು ಕಾಲೆಳೆದಿದ್ದರು. ಮಾಧ್ಯಮಗಳೂ ಇದೇ ರೀತಿ ಸುದ್ದಿ ಮಾಡಿದ್ದವು.

ಇದರ ಬೆನ್ನಲ್ಲೇ ರಮ್ಯಾ ಸ್ಪಷ್ಟನೆ ಕೊಟ್ಟಿದ್ದಾರೆ. ‘ನನಗೆ ನಿಮ್ಮ ಕಾಮೆಂಟ್ ನೋಡಿ ನಗು ಬರುತ್ತಿದೆ. ವಿನಯ್ ಸಹೋದರನ ಸಮಾನ. ನಿಮ್ಮ ಕಲ್ಪನೆಗೂ ಸ್ವಲ್ಪ ಮಿತಿಯಿರಲಿ’ ಎಂದು ರಮ್ಯಾ ಹೇಳಿದ್ದಾರೆ. ಆ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ವಿಷ ಕೊಡಿ ಎಂದು ಅತ್ತು ಕರೆದಿದ್ದಕ್ಕೆ ನಟ ದರ್ಶನ್ ಗೆ ಸಿಕ್ತು ಜೈಲಿನಲ್ಲಿ ಈ ಗ್ಯಾರಂಟಿ