ಸ್ಯಾಂಡಲ್‌ವುಡ್ ಕ್ವೀನ್ ಎಂದೇ ಹೆಸರಾಗಿರುವ ನಟಿ ರಮ್ಯಾ ಈಗಲೂ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ರಮ್ಯಾ ಅವರ ಪೋಸ್ಟ್‌ಗಾಗಿ ಫ್ಯಾನ್ ಕಾಯುತ್ತಲೇ ಇರುತ್ತಾರೆ.
ಆದರೆ ಇದೀಗ ಹಂಚಿಕೊಂಡ ಪೋಸ್ಟ್ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ರಮ್ಯಾ ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡ ನಟ ವಿನಯ್ ರಾಜ್ ಹಾಗೂ ಪುನೀತ್ ರಾಜ್‌ಕುಮಾರ್ ಮಗಳು ವಂದಿತಾ ಜತೆ ಫಾರಿನ್ ಟ್ರಿಪ್ ಮಾಡಿದ್ದಾರೆ.
ಅಲ್ಲಿ ಕಳೆದ ಸಂತಸದ ಕ್ಷಣವನ್ನು ನಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ರಮ್ಯಾ ಡೇಟಿಂಗ್‌ನಲ್ಲಿದ್ದಾರೆಂಬ ಎಂಬ ಸಂಶಯ ಮನೆ ಮಾಡಿದೆ.
ನಟಿ ರಮ್ಯಾ ಅವರು ನಟ ವಿನಯ್ ರಾಜ್‌ಕುಮಾರ್ ಜತೆಗೆ ಆತ್ಮೀಯವಾಗಿ ನಿಂತಿರುವ, ವಾಕಿಂಗ್ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅವರ ಅಭಿಮಾನಿಗಳು ವಿನಯ್ ಹಾಗೂ ರಮ್ಯಾ ಪ್ರೀತಿಯಲ್ಲಿದ್ದಾರೆ ಎಂದಿದ್ದಾರೆ.
ಈ ಫೋಟೋಗೆ ಬಗೆ ಬಗೆಯಾಗಿ ಕಮೆಂಟ್ಸ್ ಮಾಡಿದೆ. ಒಬ್ಬರು ಅನ್ನಿಸ್ತಾ ಇದ್ಯ..ಚುಮು ಚುಮು ಅನ್ನಿಸ್ತಾ ಇದ್ಯಾ ಎಂದಿದ್ದಾರೆ.
ಮತ್ತೊಬ್ಬರು ಸಿಂಗಲ್ ಆಗಿರಿ, ನಿಮಗೆ ನಮ್ಮ ಭಾವನೆ ಅರ್ಥ ಆಗ್ತಲ್ವಾ ಎಂದಿದ್ದಾರೆ.
ಇನ್ನೊಬ್ಬರು ಅವರಿಬ್ಬರು ಅಣ್ಣ ಹಾಗೂ ತಂಗಿ. ನಮ್ಮ ಕ್ವೀನ್ ಯಾವಾಗಲೂ ನಮಗೆ ಬೇಜಾರ್ ಮಾಡಲ್ಲ ಎಂದಿದ್ದಾರೆ.