Select Your Language

Notifications

webdunia
webdunia
webdunia
Sunday, 13 April 2025
webdunia

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ಆಶಿತಾ ಚಂದ್ರಪ್ಪ

ಆಶಿತಾ ಚಂದ್ರಪ್ಪ
ಬೆಂಗಳೂರು , ಗುರುವಾರ, 1 ಏಪ್ರಿಲ್ 2021 (09:05 IST)
ಬೆಂಗಳೂರು: ಕಿರುತೆರೆಯ ಖ್ಯಾತ ನಟಿ, ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ಮಾಜಿ ಸ್ಪರ್ಧಿ ಆಶಿತಾ ಚಂದ್ರಪ್ಪ ಸದ್ದಿಲ್ಲದೇ ನಿನ್ನೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.


ಕೇವಲ ಆಪ್ತರ ಸಮ್ಮುಖದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಆಶಿತಾ ರೋಹನ್ ಜೊತೆ ಸಪ್ತಪದಿ ತುಳಿದಿದ್ದಾರೆ. ಈ ಮದುವೆಗೆ ಬಿಗ್ ಬಾಸ್ ಸ್ನೇಹಿತರಾದ ಜಗನ್ ಚಂದ್ರಶೇಖರ್, ನಟ ಜಯರಾಮ್ ಕಾರ್ತಿಕ್, ತೇಜಸ್ವಿನಿ ಪ್ರಕಾಶ್ ಆಗಮಿಸಿದ್ದರು.

ನಟ ಜೆಕೆ ಮೊದಲನೆಯವರಾಗಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ನವಜೋಡಿಗೆ ಶುಭ ಕೋರಿದಾಗ ಅಭಿಮಾನಿಗಳಿಗೆ ನಿಜಕ್ಕೂ ಅಚ್ಚರಿಯಾಗಿತ್ತು. ಯಾಕೆಂದರೆ ಆಶಿತಾ ಇದುವರೆಗೆ ತಮ್ಮ ಮದುವೆ ಬಗ್ಗೆ ಎಲ್ಲೂ ಬಾಯ್ಬಿಟ್ಟಿರಲಿಲ್ಲ. ಕೆಲವು ದಿನಗಳಿಂದ ಕಿರುತೆರೆಯಿಂದ ದೂರವಿದ್ದು, ತಮ್ಮದೇ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಆಶಿತಾ ಈಗ ಮದುವೆ ಸುದ್ದಿ ನೀಡಿದ್ದು, ನೆಟ್ಟಿಗರು ಶುಭ ಹಾರೈಸಿದ್ದಾರೆ.

  

Share this Story:

Follow Webdunia kannada

ಮುಂದಿನ ಸುದ್ದಿ

ಪುಷ್ಪಾ ಚಿತ್ರದ ಚಿತ್ರೀಕರಣವನ್ನು ಮುಂದೂಡಿದ ಚಿತ್ರತಂಡ