ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆಯ ವರದಿಯನ್ನು ಏಮ್ಸ್ ವೈದ್ಯರ ತಂಡ ಸಲ್ಲಿಸಿದ್ದು, ಆತ್ಮಹತ್ಯೆಗೆ ನಟ ಶರಣಾಗಿದ್ದಾನೆ ಎನ್ನಲಾಗಿದೆ.
ಈ ನಡುವೆ ಸುಶಾಂತ್ ಸಿಂಗ್ ರದ್ದು ಕೊಲೆಯಲ್ಲ ಆತ್ಮಹತ್ಯೆ ಎಂದು ಪರಿಗಣಿಸುತ್ತಿರುವಾಗ ನಟನ ಗೆಳತಿ ರಿಯಾ ಚಕ್ರವರ್ತಿಗೆ ಜಾಮೀನು ಸಿಗುತ್ತಾ ಅನ್ನೋ ಕುತೂಹಲ ಗರಿಗೆದರಿದೆ.
ಇದೀಗ ಎಲ್ಲರ ಕಣ್ಣುಗಳು ಬಾಂಬೆ ಹೈಕೋರ್ಟ್‌ನತ್ತ ಇವೆ. ನಟನ ಗೆಳತಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೋಯಿಕ್ ಮತ್ತು ಇತರ ಮೂವರ ಜಾಮೀನು ಅರ್ಜಿಯನ್ನು ಕಾಯ್ದಿರಿಸಿದೆ. ಮುಂದಿನ ವಾರ ಹೈಕೋರ್ಟ್ ಆದೇಶ ನಿರೀಕ್ಷಿಸಲಾಗಿದೆ.