Publish Date: Thu, 22 Oct 2020 (08:52 IST)
Updated Date: Thu, 22 Oct 2020 (08:53 IST)
ಚೆನ್ನೈ : ನಟ ಸಿಂಬು ತಮಿಳು ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರು, ಇವರು ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಇದೀಗ ಅವರು ಸೋಶಿಯಲ್ ಮೀಡಯಾಕ್ಕೆ ಎಂಟ್ರಿ ಕೊಡಲಿದ್ದಾರಂತೆ.
ಹೌದು, ನಟ ಸಿಂಬು ಅವರು ವಂದ ರಾಜವತನ್ ವರುವೆನ್, 90ಎಂಎಲ್ ಮಹಾ ಚಿತ್ರಗಳಲ್ಲಿ ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಅವರು ಸುಚೀಂದ್ರನ್ ನಿರ್ದೇಶನದ ಚಿತ್ರವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ನಟ ಸಿಂಬು ಅಧಿಕೃತವಾಗಿ ತನ್ನನ್ನು ಸಾಮಾಜಿಕ ಮಾಧ್ಯಮಕ್ಕೆ ಲಿಂಕ್ ಮಾಡಲಿದ್ದಾರಂತೆ. ಅವರು 22ರಂದು ಬೆಳಿಗ್ಗೆ 9.09ಕ್ಕೆ ಫೇಸ್ ಬುಕ್, ಇನ್ ಸ್ಟಾಗ್ರಾಂ, ಟ್ವೀಟರ್, ಮತ್ತು ಯುಟ್ಯೂಬ್ ಸೇರಿದಂತೆ ಸಾಮಾಜಿಕ ಮಾಧ್ಯಮಕ್ಕೆ ಸೇರಲಿದ್ದಾರಂತೆ.