Select Your Language

Notifications

webdunia
webdunia
webdunia
webdunia

ಚಿಕ್ಕಮ್ಮನ ಮೇಲೆ ಹಲ್ಲೆ ಆರೊಪ ಸುಳ್ಳು ಎಂದ ನಟ ರಿಷಿ

ಚಿಕ್ಕಮ್ಮನ ಮೇಲೆ ಹಲ್ಲೆ ಆರೊಪ ಸುಳ್ಳು ಎಂದ ನಟ ರಿಷಿ
ಬೆಂಗಳೂರು , ಸೋಮವಾರ, 15 ಅಕ್ಟೋಬರ್ 2018 (07:26 IST)
ಬೆಂಗಳೂರು : ಚಿಕ್ಕಮ್ಮನ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ  ಅಪರೇಶನ್ ಅಲುಮೇಲಮ್ಮ ಖ್ಯಾತಿಯ ನಟ ರಿಷಿ ಈ ವಿಚಾರದ ಬಗ್ಗೆ ಇದೀಗ ಸ್ಪಷ್ಟನೆ ನೀಡಿದ್ದಾರೆ.


ನಟ ರಿಷಿ, ನನ್ನ ತಂದೆಯನ್ನು ನೋಡಲು ಮನೆಗೆ ಬಂದಾಗ ಆಸ್ತಿಗಾಗಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರ ಚಿಕ್ಕಮ್ಮ ಶಾಲಿನಿ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ನಟ ರಿಷಿ ತನ್ನ ಮೇಲೆ ಬಂದಿರುವ ಆರೋಪ  ಸುಳ್ಳು ಎಂದು ಹೇಳಿದ್ದಾರೆ.


ಮೊದಲಿನಿಂದಲೂ ಚಿಕ್ಕಮ್ಮ ತಾತನ ಬಳಿ ಹಣಕ್ಕಾಗಿ ಪೀಡಿಸುತ್ತಿದ್ದರು. ಆದರೆ ಈಗ ತಾತ ಸ್ಟ್ರೋಕ್ ಆಗಿ ಹಾಸಿಗೆ ಹಿಡಿದಿದ್ದರಿಂದ ಅವರಿಗೆ ಹಣ ಕೊಡಲು ಯಾರು ಇಲ್ಲ . ಆದಕಾರಣ ನಾನು ನಟ, ಹಣ ಚೆನ್ನಾಗಿ ಸಿಗಬಹುದು ಎಂಬ ಕಾರಣಕ್ಕೆ ನನ್ನ ಹಿಂದೆ ಬಿದ್ದಿದ್ದಾರೆ. ನಾನು ಹಣ ಕೊಡುವುದಿಲ್ಲ ಎಂದು ಹೇಳಿದ್ದಕ್ಕೆ ನನ್ನ ವಿರುದ್ಧ ಚಿಕ್ಕಮ್ಮ ಈ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರಿಗೆ ಏನೂ ಕೆಲಸವಿಲ್ಲ. ಅವರು ಬಹಳ ಕ್ರಿಮಿನಲ್ ಬುದ್ಧಿಯವರು ಎಂದು ರಿಷಿ ದೂರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಮಾಜಿ ಸ್ಪರ್ಧಿಯ ಮೇಲೆ ಅತ್ಯಾಚಾರ ಎಸಗಿದಾರಂತೆ ನಟ ಸಲ್ಮಾನ್​ ಖಾನ್​ ಹಾಗೂ ಅವರ ಸಹೋದರರು