ದುಬಾರಿ ವಾಚ್ ಧರಿಸಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾದ ನಟ ಪವನ್ ಕಲ್ಯಾಣ್

Webdunia
ಶನಿವಾರ, 7 ನವೆಂಬರ್ 2020 (14:26 IST)
ಹೈದರಾಬಾದ್ : ಪವರ್ ಸ್ಟಾರ್ ಪವನ್ ಕಲ್ಯಾಣ್ಯ ಟಾಲಿವುಡ್ ನ ಖ್ಯಾತ ನಟ. ಸರಳತೆಗೆ ಇನ್ನೊಂದು ಹೆಸರೇ ಪವನ್ ಕಲ್ಯಾಣ್ ಎಂದು ಅಭಿಮಾನಿಗಳು ಹೇಳುತ್ತಾರೆ. ಆದರೆ ಅವರ ವಿರೋಧಿಗಳು ಇದೀಗ ಅವರು ಧರಿಸಿದ ದುಬಾರಿ ವಾಚ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಹೌದು. ನಟ ಪವನ್ ಕಲ್ಯಾಣ್ ರೋಲೆಕ್ಸ್ ವಾಚ್ ಧರಿಸಿದ ಫೋಟೊ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಕೀಲ ಸಾಬ್ ಚಿತ್ರದ ಶೂಟಿಂಗ್ ಗ್ಯಾಪ್ ನಲ್ಲಿ ಪೇಪರ್ ನಲ್ಲಿ ಏನನ್ನೋ ಓದುತ್ತಿರುವ ಪವನ್ ಅವರ ಕೈಯಲ್ಲಿ ಈ ವಾಚ್ ಇದೆ. ಈ ಫೋಟೊವನ್ನು ಹಂಚಿಕೊಂಡ ಸರಳತೆಯ ವ್ಯಕ್ತಿ 40 ಲಕ್ಷರೂ ಮೌಲ್ಯದ ವಾಚ್ ನ್ನು ಬಳಸಬಹುದೇ ಎಂದು ವಿರೋಧಿಗಳು ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಅವರ ಅಭಿಮಾನಿಗಳು, ಚಿತ್ರದ ಶೂಟಿಂಗ್ ಗಾಗಿ ಅವರು ವೇಷಭೂಷಣವನ್ನು ಧರಿಸಿದ್ದಾರೆ. ಆದ್ದರಿಂದ ಚಿತ್ರದ ಪಾತ್ರಕ್ಕಾಗಿ ಅವರು ಈ ವಾಚ್ ನ್ನು ಬಳಸಿರಬಹುದು. ಅವರಿಗೆ ಈ ವಾಚ್ ಬಗ್ಗೆ ಆಸಕ್ತಿ ಇಲ್ಲ ಎಂದು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸುಹಾನಾ ಸಯ್ಯದ್ ಮದುವೆ ಡೇಟ್ ಫಿಕ್ಸ್‌, ಸರಳ ವಿವಾಹವಾಗಲಿದ್ದಾರೆ ಗಾಯಕಿ

ಗರ್ಭಾವಸ್ಥೆಯ ಬಗ್ಗೆ ಸೋನಾಕ್ಷಿ ಸಿನ್ಹಾಗೆ ಎಲ್ಲರ ಮುಂದೆಯೇ ಕಾಲೆಳೆದ ಪತಿ ಜಹೀರ್ ಇಕ್ಬಾಲ್‌

ಚಾಮುಂಡಿ ತಾಯಿ ದರ್ಶನ ಪಡೆದು ಫ್ಯಾನ್ಸ್ ವಾರ್ ಬಗ್ಗೆ ರಿಷಬ್ ಶೆಟ್ಟಿ ಹೇಳಿದ ಮಾತು ನೋಡಿದ್ರೆ ಹೆಮ್ಮೆ ಅನಿಸಬಹುದು

ಜನಪ್ರಿಯ ಧಾರಾವಾಹಿ ಮಹಾಭಾರತದ ಕರ್ಣ ಪಾತ್ರಧಾರಿ ಪಂಕಜ್ ಧೀರ್ ಇನ್ನಿಲ್ಲ

ಮದುವೆ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾರಾಮ್‌

ಮುಂದಿನ ಸುದ್ದಿ
Show comments