Daily Horoscope
✕

ಮಲಯಾಳಂ ಸಿನಿಮಾದ ಖ್ಯಾತ ನಟ ನೆಡುಮುಡಿ ವೇಣು ಇನ್ನಿಲ್ಲ

Webdunia
ಸೋಮವಾರ, 11 ಅಕ್ಟೋಬರ್ 2021 (16:46 IST)
ಕೊಚ್ಚಿ: ಮಲಯಾಳಂ ಚಿತ್ರರಂಗದ ದಿಗ್ಗಜ ಹಿರಿಯ ನಟ, ರಾಷ್ಟ್ರಪ್ರಶಸ್ತಿ ವಿಜೇತ ನೆಡುಮುಡಿ ವೇಣು ಇಂದು ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.


ಕೊರೋನಾದಿಂದ ಚೇತರಿಸಿಕೊಳ್ಳುತ್ತಿದ್ದ ಅವರು ತಿರುವನಂತಪುರಂನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಭಾನುವಾರ ಅನಾರೋಗ್ಯದಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸುಮಾರು 500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಅವರು ಮೂರು ಬಾರಿ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.  ಮಲಯಾಳಂ, ತಮಿಳು ಅಲ್ಲದೆ ಒಂದು ಇಂಗ್ಲಿಷ್ ಭಾಷೆಯ ಸಿನಿಮಾದಲ್ಲೂ ನಟಿಸಿದ ಖ್ಯಾತಿ ಅವರದ್ದಾಗಿದೆ. ಕಮಲ್ ಹಾಸನ್ ಅವರ ‘ಇಂಡಿಯನ್’, ವಿಕ್ರಮ್ ಅಭಿನಯದ ‘ಅನ್ನಿಯನ್’ ಅವರ ತಮಿಳು ಸಿನಿಮಾಗಳು. ಮಲಯಾಂನ ಬಹುತೇಕ ಸಿನಿಮಾಗಳಲ್ಲಿ ತಂದೆ, ಪೋಷಕ ಪಾತ್ರಗಳಲ್ಲಿ ಮನೋಜ್ಞ ಅಭಿನಯ ನೀಡುತ್ತಿದ್ದ ನೆಡುಮುಡಿ ವೇಣು ಅವರು ಕೊನೆಯದಾಗಿ ನಟಿಸಿದ್ದ ಸಿನಿಮಾವೆಂದರೆ ಮೋಹನ್ ಲಾಲ್ ನಾಯಕರಾಗಿರುವ ‘ಮರಕ್ಕಾರ್: ಅರಬ್ಬಿ ಕಡಲಿಂದೆ ಸಿಂಹಮ್’ ಆಗಿತ್ತು. ಇದೀಗ ಪತ್ನಿ ಮತ್ತು ಇಬ್ಬರು ಪುತ್ರರು ಸೇರಿದಂತೆ ಅಪಾರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಅವರ ನಿಧನಕ್ಕೆ ಸಿನಿ ಲೋಕ ಕಂಬನಿ ಮಿಡಿದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ: ಅಪ್ಪು ಸಮಾದಿಗೆ ಕುಟುಂಬಸ್ಥರಿಂದ ವಿಶೇಷ ಪೂಜೆ, ಕಣ್ಣೀರಿಟ್ಟ ಅಶ್ವಿನಿ

ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಮಹತ್ವದ ಬೆಳವಣಿಗೆ: ಪ್ರತ್ಯಕ್ಷ ಸಾಕ್ಷಿ ಪುನೀತ್ ಕೊಟ್ಟ ಟ್ವಿಸ್ಟ್ ಏನು

ಧನ್ವೀರ್ ಗೆ ಜೈಲಿನಿಂದ ವಾರ್ನಿಂಗ್ ಕೊಡಲು ಹೋಗಿ ಬೇಡದ ರಗಳೆ ಮೈಮೇಲೆಳೆದುಕೊಂಡರಾ ದರ್ಶನ್

ಧನ್ವೀರ್ ವಿವಾದದ ನಡುವೆ ವಿಜಯಲಕ್ಷ್ಮಿ ದರ್ಶನ್ ಮಹತ್ವದ ನಿರ್ಧಾರ

ಧನ್ವೀರರನ್ನು ಬ್ಲಾಕ್ ಮಾಡಿದ್ರಾ ವಿಜಯಲಕ್ಷ್ಮಿ ದರ್ಶನ್: ಕೌಂಟರ್ ಕೊಟ್ಟ ಧನ್ವೀರ ಗೌಡ

ಮುಂದಿನ ಸುದ್ದಿ
Show comments