Select Your Language

Notifications

webdunia
webdunia
webdunia
webdunia

ತೆಲುಗು ಸಿನಿಮಾಗಾಗಿ ಹೈದರಾಬಾದ್ ಗೆ ಬಂದಿಳಿದ ಜೆನಿಲಿಯಾ

ತೆಲುಗು ಸಿನಿಮಾಗಾಗಿ ಹೈದರಾಬಾದ್ ಗೆ ಬಂದಿಳಿದ ಜೆನಿಲಿಯಾ
ಹೈದರಾಬಾದ್ , ಭಾನುವಾರ, 10 ಅಕ್ಟೋಬರ್ 2021 (16:51 IST)
ಹೈದರಾಬಾದ್: ನಟಿ ಜೆನಿಲಿಯಾ ಡಿಸೋಜಾ, ರಿತೇಶ್ ದೇಶ್ ಮುಖ್ ಅವರನ್ನು ಮದುವೆಯಾದ ಬಳಿಕ ಸಿನಿಮಾ ಬಿಟ್ಟು ಮುಂಬೈನಲ್ಲಿ ನೆಲೆಯಾಗಿರಬಹುದು. ಆದರೆ ತಮ್ಮ ಮೂಲ ತೆಲುಗು ಸಿನಿಮಾ ರಂಗವನ್ನು ಅವರು ಮರೆತಿಲ್ಲ.



ಇಂದು ನಡೆದ ತೆಲುಗು ಸಿನಿಮಾ ಕಲಾವಿದರ ಸಂಘದ ಚುನಾವಣೆಗೆ ಮತದಾನ ಮಾಡಲು ಜೆನಿಲಿಯಾ ಮುಂಬೈನಿಂದ ಹೈದರಾಬಾದ್ ಗೆ ಬಂದಿದ್ದಾರೆ. ‘ಮಾ’ ಅಧ್ಯಕ್ಷ ಚುನಾವಣೆಗೆ ಪ್ರಕಾಶ್ ರಾಜ್ ಮತ್ತು ವಿಷ್ಣು ಮಂಚು ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ.

ಇಂದು ಬೆಳಿಗ್ಗೆಯಿಂದೇ ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ತೇಜ್, ಪವನ್ ಕಲ್ಯಾಣ್ ಸೇರಿದಂತೆ ಘಟಾನಘಟಿಗಳು ಬಂದು ವೋಟ್ ಮಾಡಿದ್ದಾರೆ. ಜೆನಿಲಿಯಾ ಕೂಡಾ ಮತ ಚಲಾಯಿಸಲೆಂದೇ ಮುಂಬೈನಿಂದ ಬಂದಿದ್ದು, ತೆಲುಗು ಸಿನಿಮಾ ರಂಗ ನನ್ನ ತವರು ಮನೆಯಿದ್ದಂತೆ. ಒಬ್ಬ ಒಳ್ಳೆಯ ಅಧ್ಯಕ್ಷರೇ ಆಯ್ಕೆಯಾಗುತ್ತಾರೆ ಎಂದು ನಂಬಿದ್ದೇನೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರತ್ನನ್ ಪ್ರಪಂಚಕ್ಕಾಗಿ ಹಾಡಿದ ಪವರ್ ಸ್ಟಾರ್ ಪುನೀತ್