Publish Date: Sun, 23 Jan 2022 (10:00 IST)
Updated Date: Sun, 23 Jan 2022 (10:12 IST)
ಕೊಚ್ಚಿ: ನಟಿ ಭಾವನಾಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟ ದಿಲೀಪ್ ಮತ್ತು ಸಹಚರರು ಇಂದು ಕ್ರೈಂ ಬ್ರ್ಯಾಂಚ್ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.
ಪ್ರಕರಣದ ವಿಚಾರಾಣಾಧಿಕಾರಿಗಳಿಗೆ ದಿಲೀಪ್ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಕ್ರೈಂ ಬ್ರ್ಯಾಂಚ್ ದಿಲೀಪ್, ಸಹೋದರ ಅನೂಪ್ ಮತ್ತು ಸಹೋದರಿಯ ಪತಿಯನ್ನು ವಿಚಾರಣೆಗೊಳಪಡಿಸುತ್ತಿದ್ದಾರೆ.
ಇಂದು ಬೆಳಿಗ್ಗೆ 9 ಗಂಟೆಗೆ ಆಲುವಾದ ಕ್ರೈಂ ಬ್ರ್ಯಾಂಚ್ ಕಚೇರಿಗೆ ದಿಲೀಪ್ ಆಗಮಿಸಿದ್ದಾರೆ. ಇನ್ನು ಮೂರು ದಿನಗಳ ಕಾಲ ವಿಚಾರಣೆ ನಡೆಯಲಿದೆ.