Select Your Language

Notifications

webdunia
webdunia
webdunia
webdunia

ತಮ್ಮ ಹೆಸರಲ್ಲಿ ನಕಲಿ ಖಾತೆ ಕ್ರಿಯೆಟ್ ಮಾಡಿ ದುರುಪಯೋಗ ಪಡಿಸಿಕೊಳ್ಳುತ್ತಿರುವುದಕ್ಕೆ ಗರಂ ಆದ ನಟ ಧ್ರುವ ಸರ್ಜಾ

ತಮ್ಮ ಹೆಸರಲ್ಲಿ ನಕಲಿ ಖಾತೆ ಕ್ರಿಯೆಟ್ ಮಾಡಿ ದುರುಪಯೋಗ ಪಡಿಸಿಕೊಳ್ಳುತ್ತಿರುವುದಕ್ಕೆ ಗರಂ ಆದ ನಟ ಧ್ರುವ ಸರ್ಜಾ
ಬೆಂಗಳೂರು , ಸೋಮವಾರ, 23 ಏಪ್ರಿಲ್ 2018 (11:46 IST)
ಬೆಂಗಳೂರು : ತಮ್ಮ ಹೆಸರಲ್ಲಿ ಫೇಸ್ ಬುಕ್ ಹಾಗೂ ಇನ್​​ಸ್ಟಾಗ್ರಾಂನಲ್ಲಿ ನಕಲಿ ಖಾತೆ ಕ್ರಿಯೆಟ್ ಮಾಡಿ ದುರಪಯೋಗ ಪಡಿಸಿಕೊಳ್ಳುತ್ತಿರುವ  ಹಿನ್ನಲೆಯಲ್ಲಿ ಇದೀಗ ಸ್ಯಾಂಡಲ್ ​ವುಡ್ ​ನ ಆಯಕ್ಷನ್ ಪ್ರಿನ್ಸ್​ ಧ್ರುವ ಸರ್ಜಾ ಅವರು ಗರಂ ಆಗಿದ್ದಾರೆ.


ನಟ ಧ್ರುವ ಸರ್ಜಾ ಅವರು ಇದೂವರೆಗೆ ಫೇಸ್​ಬುಕ್​ ಆಗಲೀ, ಇನ್​​ಸ್ಟಾಗ್ರಾಂನಲ್ಲಾಗಲೀ ಯಾವುದೇ ಖಾತೆ ತೆರೆದಿಲ್ಲ. ಆದರೂ ಅವರ ಹೆಸರಲ್ಲಿ ಯಾರೋ ಕಿಡಿಗೇಡಿಗಳು ನಕಲಿ ಖಾತೆ ಕ್ರಿಯೆಟ್ ಮಾಡಿ ಕಂಡ ಕಂಡೋರಿಗೆ ಅಶ್ಲೀಲ ಮೆಸೇಜ್​ ಮಾಡ್ತಿದ್ದಾರಂತೆ.
ಇದನ್ನು ತಿಳಿದ ಧ್ರುವ, ಅವರು ತಮ್ಮ ಟ್ವಿಟ್ಟರ್​ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ ನನ್ನ ಹೆಸರಿನ ಯಾವುದೇ ಫೇಸ್​ಬುಕ್​, ಇನ್​ಸ್ಟಾಗ್ರಾಂ ಖಾತೆಗಳಿಲ್ಲ. ಹೆಸರಿನಲ್ಲಿರೋ ನಕಲಿ ಖಾತೆಗಳಿಂದ ಅನ್ ​ಫಾಲೋ ಮಾಡಿ. ಅಲ್ಲದೇ, ಮತ್ತೆ ಇಂತಹ ಮೆಸೇಜ್​ಗಳು ರಿಪೀಟ್ ಆದಲ್ಲಿ ಸೈಬರ್​ ಕ್ರೈಂಗೆ ದೂರು ನೀಡಿ ಅಂತಾ ಅಭಿಮಾನಿಗಳಲ್ಲಿ ಧ್ರುವ ಮನವಿ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬೆಕ್ಕಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ ನಟಿ ಶಿಲ್ಪಾ ಶೆಟ್ಟಿ