Daily Horoscope

Select Your Language

Notifications

webdunia
webdunia
webdunia
webdunia

ಜೈಲಿನಲ್ಲಿರುವ ನಟ ದರ್ಶನ್ ಗೆ ಈಗ ಶುರುವಾಗಿ ಟೆನ್ಷನ್: ಆಪ್ತರೇ ಹೀಗೆ ಮಾಡಿದರಲ್ಲಾ...

Darshan
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಗೆ ಈಗ ಹೊಸ ಟೆನ್ಷನ್ ಶುರುವಾಗಿದೆ. ಆಪ್ತರೇ ಹೀಗೆ ಮಾಡಿದರಲ್ಲಾ ಎಂಬ ಚಿಂತೆ ಕಾಡುತ್ತಿದೆಯಂತೆ.

ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ವಿಚಾರಣಾಧೀನ ಕೈದಿಯಾಗಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಸಾಕ್ಷ್ಯಗಳ ವಿಚಾರಣೆ ಆಗುವವರೆಗೂ ಅವರಿಗೆ ಜಾಮೀನು ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿರುವುದರಿಂದ ಅವರಿಗೆ ಹೊರಗೆ ಬರುವ ದಾರಿ ಕಾಣದಾಗಿದೆ.

ಇದರ ನಡುವೆ ಈಗ ಅತ್ಯಾಪ್ತ ಎನಿಸಿಕೊಂಡಿದ್ದ ಪದ್ರೂಷ್ ಮಾಫಿ ಸಾಕ್ಷಿಯಾಗಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಇದು ದರ್ಶನ್ ಗೆ ಸಂಕಷ್ಟ ತಂದೊಡ್ಡಲಿದೆ. ಜೊತೆಗಿದ್ದವರೇ ಆರೋಪ ಒಪ್ಪಿಕೊಂಡು ಸಾಕ್ಷಿ ನೀಡಿದರೆ ಆತ ಅದರಿಂದ ಬಚಾವ್ ಆಗಬಹುದು. ಆದರೆ ಇತರೆ ಆರೋಪಿಗಳ ವಿರುದ್ಧ ಬಲವಾದ ಸಾಕ್ಷ್ಯ ಸಿಕ್ಕಂತಾಗುತ್ತದೆ.

ಇದು ದರ್ಶನ್ ಚಿಂತೆಗೆ ಕಾರಣವಾಗಿದೆ ಎನ್ನಲಾಗಿದೆ. ಮಾಫಿ ಸಾಕ್ಷಿ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿ ಓದಿದ ಬಳಿಕ ದರ್ಶನ್ ಚಿಂತಾಕ್ರಾಂತರಾಗಿ ಕುಳಿತಿದ್ದಾರೆ ಎಂದು ವರದಿಯಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಸಲ್ಮಾನ್‌ ಖಾನ್‌, ಸಹೋದರಿ ಅಲ್ವಿರಾ ಖಾನ್‌ಗೆ ಸಂಕಷ್ಟ