Select Your Language

Notifications

webdunia
webdunia
webdunia
webdunia

ಇಂದು ವಿಚಾರಣೆಗೆ ನಟ ದರ್ಶನ್

Actor Darshan
bangalore , ಬುಧವಾರ, 15 ನವೆಂಬರ್ 2023 (14:03 IST)
ಮಹಿಳೆಗೆ ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಟ ದರ್ಶನ್ ಆರ್.ಆರ್.ನಗರ ಪೊಲೀಸ್‍ ಠಾಣೆಯಲ್ಲಿ ವಿಚಾರಣೆಗಾಗಿ ಹಾಜರಾಗಲಿದ್ದಾರೆ. ಇಂದು  ಸ್ಟೇಷನ್ ಗೆ ಹಾಜರಾಗಿ ಹೇಳಿಕೆ ದಾಖಲಿಸಲಿದ್ದಾರೆ ದರ್ಶನ್. ಮೂರು ದಿನದ ಒಳಗೆ ವಿಚಾರಣೆಗೆ ಬರಬೇಕೆಂದು ಪೊಲೀಸ್ ರು ನೋಟೀಸ್ ಕೊಟ್ಟಿದ್ದರು.

ಸಿಸಿಟಿವಿ ಫೂಟೇಜ್ ಜೊತೆ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಲು ಸೂಚಿಸಲಾಗಿತ್ತು. ಈ ಹಿಂದೆ ದರ್ಶನ್ ವಿರುದ್ಧ ಆರ್‌ಆರ್ ನಗರದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ದರ್ಶನ್ ಮನೆಯ ನಾಯಿಗಳು ಮಹಿಳೆಯೊಬ್ಬರ ಮೇಲೆ ಎರಗಿ ಕಚ್ಚಿದ ಸಂಬಂಧ ಐಪಿಸಿ 289ರ ಅಡಿ ನಾಯಿ ನೋಡಿಕೊಳ್ಳುತ್ತಿದ್ದವನ ಮೇಲೆ ಮತ್ತು ನಟ ದರ್ಶನ್ ವಿರುದ್ಧ ಕೇಸ್ ದಾಖಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಆ ನಟಿಯ ಜೊತೆ ನಟಿಸುವುದು ಸಾಧ್ಯವಿಲ್ಲ ಎಂದ ಕತ್ರಿನಾ ಕೈಫ್