Select Your Language

Notifications

webdunia
webdunia
webdunia
webdunia

Actor Darshan: ಪವಿತ್ರಾ ಗೌಡ ಹೊಸ ಸ್ಟೇಟಸ್ ಹಿಂದಿನ ಟಾರ್ಗೆಟ್ ಯಾರು

ನಟ ದರ್ಶನ್

Sampriya

ಬೆಂಗಳೂರು , ಶುಕ್ರವಾರ, 23 ಮೇ 2025 (15:45 IST)
Photo Credit X
ಬೆಂಗಳೂರು: ಕೋರ್ಟ್‌ನಲ್ಲಿ ದರ್ಶನ್ ಬಳಿ ಫೋನ್‌ ನಂಬರ್‌ಗಾಗಿ ಬೇಡಿದ ಬೆನ್ನಲ್ಲೇ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪವಿತ್ರಾ ಗೌಡ ಹಂಚಿಕೊಂಡಿರುವ ಪೋಸ್ಟ್ ಭಾರೀ ಕುತೂಹಲ ಮೂಡಿಸಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಳಿಕ ನಟ ದರ್ಶನ್ ಅವರು ತಮ್ಮ ಗೆಳತಿ ಪವಿತ್ರಾ ಗೌಡ ಅವರಿಂದ ದೂರವಾಗಿ ಫ್ಯಾಮಿಲಿ ಜತೆ ಸಮಯ ಕಳೆಯುತ್ತಿದ್ದಾರೆ.  ಫ್ಯಾಮಿಲಿ ಮ್ಯಾನ್ ಆಗಿರುವ ದರ್ಶನ್ ಈಚೆಗೆ ಪತ್ನಿ ಜತೆಗೆ ತಮ್ಮ 22ನೇ ವಿವಾಹ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು.

ಅದಲ್ಲದೆ ಪತ್ನಿ ಜತೆ ಮುದ್ದು ರಾಕ್ಷಸಿ ಹಾಡಿಗೆ ಹೆಜ್ಜೆ ಹಾಕಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯಿತು. ಅದರ ಬೆನ್ನಲ್ಲೇ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧದ ವಿಚಾರಣೆಯಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಮುಖಾಮುಖಿಯಾದರು.

ಈ ವೇಳೆ ದರ್ಶನ್‌ ಮಾತನಾಡಿಸಲು ಹಾಗೂ ಫೋನ್ ನಂಬರ್ ಅನ್ನು ಪಡೆದುಕೊಳ್ಳಲು ಪವಿತ್ರಾ ಗೌಡ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಅಂದಿನ ಪವಿತ್ರಾ ಗೌಡ ಲುಕ್‌ ಭಾರೀ ಕುತೂಹಲವನ್ನು ಮೂಡಿಸಿತು. ಕೋರ್ಟ್‌ಗೆ ಬಿಳಿ ಸೀರೆಯಲ್ಲಿ ಬಂದ ಪವಿತ್ರಾ, ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್‌  ಮತ್ತಷ್ಟು ಕುತೂಹಲವನ್ನು ಮೂಡಿಸಿದೆ.

ದರ್ಶನ್ ಜತೆಗಿನ ಸ್ನೇಹ ಇನ್ನೂ ಉಳಿದಿಲ್ಲ ಎಂಬ ಹಾಗೇ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಸಮಯ ಹಾಗೂ ತಾಳ್ಮೆ ಮುಖ್ಯ, ನಿನ್ನ ಮೌನ ಎಲ್ಲ ಪ್ರಶ್ನೆಗಳಿಗೆ, ನಿನ್ನ ಮುಖದ ನಗು ಎಲ್ಲದಕ್ಕೂ ಸರಿಯಾದ ಪ್ರತಿಕ್ರಿಯೆ ಎಂದು ತಮ್ಮ ಕೋರ್ಟ್ ಲುಕ್‌ನ ಪೋಟೋವನ್ನು ಶೇರ್ ಮಾಡಿ ಬರೆದುಕೊಂಡಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ ಎಲ್ಲವನ್ನು ಕಳೆದುಕೊಂಡ ಹಾಗೆ ಸ್ವಲ್ಪ ದಿನ ನಟಿಸಿ ನೋಡು, ನಿನ್ನವರು ಯಾರು ಎಂದು ತಿಳಿಯುತ್ತದೆ, ತಾಳ್ಮೆ ತುಂಬಾನೇ ಮುಖ್ಯ ಎಂದು ಬರೆದುಕೊಂಡಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

Madenur Manu: ಗಂಡನ ಮೇಲೆ ಬಂದಿರುವ ರೇಪ್ ಕೇಸ್ ಬಗ್ಗೆ ಮಡೆನೂರು ಮನು ಪತ್ನಿ ಶಾಕಿಂಗ್ ಹೇಳಿಕೆ