Select Your Language

Notifications

webdunia
webdunia
webdunia
webdunia

ಡೆವಿಲ್ ಸಿನಿಮಾ ಶೂಟಿಂಗ್‌ಗಾಗಿ ಪುತ್ರನ ಜತೆ ಥೈಲ್ಯಾಂಡ್‌ಗೆ ಹಾರಿದ ನಟ ದರ್ಶನ್‌

ನಟ ದರ್ಶನ್ ತೂಗುದೀಪ್

Sampriya

ಬೆಂಗಳೂರು , ಬುಧವಾರ, 16 ಜುಲೈ 2025 (20:41 IST)
Photo Credit X
ದಿ ಡೆವಿಲ್ ಸಿನಿಮಾದ ಶೂಟಿಂಗ್‌ಗಾಗಿ ಫ್ಯಾಮಿಲಿ ಜತೆ ನಟ ದರ್ಶನ್ ಅವರು ಥೈಲ್ಯಾಂಡ್‌ಗೆ ತೆರಳಿದ್ದಾರೆ. ಪುತ್ರ ವಿನೀಶ್ ಕೂಡ ದರ್ಶನ್‌ಗೆ ಜೊತೆಯಾಗಿ ಪ್ರಯಾಣಿಸಿದ್ದಾರೆ. ಡೆವಿಲ್ ಚಿತ್ರದ ನಿರ್ದೇಶಕ ಪ್ರಕಾಶ್ ಜಯರಾಂ ಸೇರಿ ಚಿತ್ರತಂಡ ದರ್ಶನ್ ಜೊತೆಯೇ ಪ್ರಯಾಣ ಬೆಳೆಸಿದ್ದಾರೆ.

ಮಂಗಳವಾರ ರಾತ್ರಿ ದರ್ಶನ್ ಥೈಲ್ಯಾಂಡ್‌ಗೆ ತೆರಳಿದ್ದು ,ಬ್ಯಾಂಕಾಕ್ ತಲುಪಿದ್ದಾರೆ. ನಾಳೆಯಿಂದ ಸಿನಿಮಾದ ಹಾಡಿನ ಶೂಟಿಂಗ್ ಆರಂಭವಾಗಲಿದೆ. 

ಚಿತ್ರದುರ್ಗಾದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಳಿಕ ಇದೀಗ ಮೊದಲ ಬಾರಿ ದರ್ಶನ್ ಅವರು ವಿದೇಶ ಪ್ರಯಾಣ ಬೆಳೆಸಿರುವುದು. 

ಮಂಗಳವಾರ ರಾತ್ರಿ ಬೆಂಗಳೂರು ಇಂಟರ್‌ನ್ಯಾಶನಲ್ ವಿಮಾನ ನಿಲ್ದಾಣದಲ್ಲಿ ದರ್ಶನ್ ಪುತ್ರ ವಿನೀಶ್ ಹಾಗೂ ಡೈರೆಕ್ಟರ್ ಪ್ರಕಾಶ್ ಜೊತೆ ಕುಳಿತಿರುವ ಫೋಟೋ ಲಭ್ಯವಾಗಿದೆ. 

ಕೊಲೆ ಆರೋಪದಲ್ಲಿ ಬಂಧಿತರಾಗಿದ್ದ ದರ್ಶನ್ ಪಾಸ್‌ಪೋರ್ಟ್‌ನ್ನು ಕೋರ್ಟ್‌ ವಶಪಡಿಸಿಕೊಂಡಿತ್ತು. ಇದೀಗ ಜಾಮೀನು ಪಡೆದುಕೊಂಡಿರುವ ದರ್ಶನ್ ಕೋರ್ಟ್‌ನಿಂದ ಅನುಮತಿ ಪಡದೇ ವಿದೇಶಕ್ಕೆ ತೆರಳುತ್ತಿದ್ದಾರೆ. ಡೆವಿಲ್ ಚಿತ್ರದ ಹಾಡೊಂದರ ಚಿತ್ರೀಕರಣಕ್ಕಾಗಿ ದರ್ಶನ್ ಥೈಲ್ಯಾಂಡ್‌ಗೆ ಹೋಗಿದ್ದು, ಈ ಮೂಲಕ ಡೆವಿಲ್ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯವಾಗುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹೊಂಬಾಳೆ ಪ್ರೊಡಕ್ಷನ್ ಬಗ್ಗೆ ಮೆಚ್ಚುಗೆಯ ಮಾತನಾಡಿ, ಮತ್ತಷ್ಟು ಸಿನಿಮಾ ಮಾಡುವ ಬಯಸುತ್ತೇನೆಂದ ಪ್ರಭಾಸ್‌