Webdunia - Bharat's app for daily news and videos

Install App

ಸಿನಿಮಾಗೆ ಕಮ್ ಬ್ಯಾಕ್ ಮಾಡುತ್ತಿರುವ ಅನಿರುದ್ಧ್ ಜತ್ಕಾರ್

Webdunia
ಶುಕ್ರವಾರ, 21 ಜುಲೈ 2023 (16:27 IST)
Photo Courtesy: WD
ಬೆಂಗಳೂರು: ಕೆಲವು ದಿನಗಳ ಬ್ರೇಕ್ ನ ನಂತರ ನಟ ಅನಿರುದ್ಧ್ ಜತ್ಕಾರ್ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ.

ನಿನ್ನೆ ಮೈಸೂರಿನ ಸಾಹಸಸಿಂಹ ವಿಷ್ಣುವರ್ಧನ್‍ ಸ್ಮಾರಕದಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ನೆರವೇರಿದೆ. ಈ ವೇಳೆ ಭಾರತಿ ವಿಷ್ಣುವರ್ಧನ್ ಕೂಡಾ ಹಾಜರಿದ್ದರು. ಜೊತೆ ಜೊತೆಯಲಿ ಧಾರವಾಹಿ ವಿವಾದದ ಬಳಿಕ ಅನಿರುದ್ಧ್ ಅವರನ್ನು ಮತ್ತೆ ತೆರೆ ಮೇಲೆ ನೋಡಲು ಅವರ ಅಭಿಮಾನಿಗಳು ಕಾಯುತ್ತಿದ್ದರು. ಈ ನಡುವೆ ಸೂರ್ಯವಂಶ ಎಂಬ ಧಾರವಾಹಿ ಸೆಟ್ಟೇರಿದರೂ ಬಳಿಕ ಅರ್ಧಕ್ಕೇ ನಿಂತಿದ್ದು ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಇದೀಗ ಸಿನಿಮಾ ಮೂಲಕ ಭರ್ಜರಿಯಾಗಿ ಅನಿರುದ್ಧ್ ಕಮ್ ಬ್ಯಾಕ್ ಮಾಡುತ್ತಿದ್ದಾರೆ ಎನ್ನಬಹುದು.

ಅಂದ ಹಾಗೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ವಿಜಯ್ ರಾಘವೇಂದ್ರ ನಾಯಕರಾಗಿ ರಾಘು ಸಿನಿಮಾ ಮಾಡಿದ್ದ ಆನಂದ್ ರಾಜ್. ಚಿತ್ರದ ಕತೆ ಕೂಡಾ ಆನಂದ್ ಅವರದ್ದೇ. ಈಗ ಅನಿರುದ್ಧ್ ನಾಯಕರಾಗಿ ಹೊಸ ಸಿನಿಮಾಗೆ ಸರ್ವೋತ್ತಮ್ ರಾಜು ಬಂಡವಾಳ ಹೂಡಲಿದ್ದಾರೆ. ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜಿಸಲಿದ್ದಾರೆ. ಚಿತ್ರದಲ್ಲಿ ಅನಿರುದ್ಧ್ ಗೆ ಇಬ್ಬರು ನಾಯಕಿಯರು. ನಿಧಿ ಸುಬ್ಬಯ್ಯ ಮತ್ತು ರಾಚೆಲ್ ಡೇವಿಡ್ ಅಭಿನಯಿಸುತ್ತಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಟಾಕ್ಸಿಕ್ ಬಿಡುಗಡೆಗೆ ಹತ್ತಿರವಾಗುತ್ತಿರುವಾಗ ತಿರುಮಲದಲ್ಲಿ ತಲೆ ಬೋಳಿಸಿದ್ರಾ ನಯನತಾರಾ, ಫೋಟೋ ಹಿಂದಿನ ಅಸಲಿಯತ್ತೇನು

ನಾನು ಇನ್ಮುಂದೆ ಆಂಕರಿಂಗ್ ಮಾಡಲ್ಲ: ದಿಡೀರ್ ಈ ನಿರ್ಧಾರ ಮಾಡಿದ್ದೇಕೆ ಅನುಪಮಾ ಗೌಡ

ರೇಣುಕಾಸ್ವಾಮಿ ಮರ್ಡರ್ ಕೇಸ್: ನಟ ದರ್ಶನ್ ಗೆ ಇಂದು ಮಹತ್ವದ ದಿನ

ನಟರು ದೇವಲೋಕದಿಂದ ಇಳಿದು ಬಂದವರಾ… ಏರ್ ಪೋರ್ಟ್ ನಲ್ಲಿ ಅಲ್ಲು ಅರ್ಜುನ್ ವರ್ತನೆಗೆ ಟೀಕೆ Video

ಕೇರಳಕ್ಕೆ ಮರಳುವ ದಾರಿ ತಪ್ಪಿದ್ದ ಮಮ್ಮುಟ್ಟಿ: ಸಹಾಯಕ್ಕೆ ಬಂದ ಸ್ಥಳೀಯನಿಗೆ ಮಾಡಿದ್ದೇನು ನೋಡಿ Video

ಮುಂದಿನ ಸುದ್ದಿ
Show comments