ಮಗಳಿಗೆ ನಾಮಕರಣ ಶಾಸ್ತ್ರ ಮಾಡಿಸಿದ ನಟ ಅಜಯ್ ರಾವ್; ಮಗುವಿನ ಹೆಸರೇನು ಗೊತ್ತಾ?

ಬುಧವಾರ, 5 ಡಿಸೆಂಬರ್ 2018 (07:09 IST)
ಬೆಂಗಳೂರು : ಇತ್ತೀಚೆಗೆ ಹೆಣ್ಣು ಮಗುವಿಗೆ ತಂದೆಯಾಗಿದ ಸ್ಯಾಂಡಲ್ ವುಡ್ ನಟ ಅಜಯ್ ರಾವ್ ಅವರು ಇದೀಗ ತಮ್ಮ ಮುದ್ದಾದ ಮಗಳಿಗೆ ನಾಮಕರಣ ಮಾಡಿದ್ದಾರೆ.


ಅಜಯ್ ರಾವ್ ಡಿ. 14, 2014ರಂದು ಸ್ವಪ್ನ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೇ ನ. 23ರಂದು  ಅಜಯ್ ರಾವ್ ಅವರ ಪತ್ನಿ ಸ್ವಪ್ನ ರಾವ್ ಹೆಣ್ಣು ಮಗುವಿಗೆ ಜನ್ಮ ನೀಡಿದರು.


ಇದೀಗ ತಮ್ಮ ಮಗುವಿಗೆ ನಾಮಕರಣ ಶಾಸ್ತ್ರ ಮಾಡಿಸಿದ ನಟ ಅಜಯ್ ಅವರು ತಮ್ಮ ಮುದ್ದಾದ ಹೆಣ್ಣು ಮಗುವಿಗೆ ‘ಚೆರಿಷ್ಮಾ’ ಎಂದು ಹೆಸರಿಟ್ಟಿದ್ದಾರೆ. ತಮ್ಮ ಮಗಳ ನಾಮಕರಣ ಕಾರ್ಯಕ್ರಮದ ಫೋಟೋವನ್ನು ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, “ನಾವು ಡಿ. 2ರಂದು ಅವಳಿಗೆ ಚೆರಿಷ್ಮಾ ಎಂದು ನಾಮಕರಣ ಮಾಡಿದ್ದೇವೆ. ಪೂರ್ತಿ ಹೆಸರು ಚೆರಿಷ್ಮಾ ಅಜಯ್ ರಾವ್” ಎಂದು ಟ್ವೀಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸ್ಯಾಂಡಲ್ ವುಡ್ ನ ನಟ, ನಿರ್ದೇಶಕ ಎ.ಆರ್​. ಬಾಬು ಇನ್ನಿಲ್ಲ