ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಈಗ ಎಷ್ಟು ವರ್ಷ, ಅಣ್ಣನಿಂದ ಎಷ್ಟು ವರ್ಷ ಚಿಕ್ಕವರು ಧ್ರುವ

Krishnaveni K
ಭಾನುವಾರ, 6 ಅಕ್ಟೋಬರ್ 2024 (09:44 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಇಂದು ಜನ್ಮದಿನದ ಸಂಭ್ರಮ. ಅವರಿಗೆ ಈಗ ಎಷ್ಟು ವರ್ಷ, ಅಣ್ಣ ಚಿರು ಸರ್ಜಾರಿಂದ ಧ್ರುವ ಎಷ್ಟು ವರ್ಷ ಚಿಕ್ಕವರು ಎಂಬಿತ್ಯಾದಿ ವಿವರ ಇಲ್ಲಿದೆ ನೋಡಿ.

ಧ್ರುವ ಸರ್ಜಾ ಇಂದು 36 ನೆಯ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಧ್ರುವ ಚಿತ್ರರಂಗಕ್ಕೆ ಕಾಲಿಟ್ಟು 12 ವರ್ಷವೇ ಆಗಿದೆ. ಅದ್ಧೂರಿ ಸಿನಿಮಾ ಮೂಲಕ ಅವರು ನಾಯಕನಾಗಿ ತೆರೆಗೆ ಎಂಟ್ರಿ ಕೊಟ್ಟಿದ್ದರು. ಆದರೆ ಚಿತ್ರರಂಗಕ್ಕೆ ಕಾಲಿಟ್ಟ ವರ್ಷಗಳಷ್ಟೂ ಧ್ರುವ ಸಿನಿಮಾ ಮಾಡಿಲ್ಲ.

ಧ್ರುವ ಇಷ್ಟು ವರ್ಷಗಳಲ್ಲಿ ಮಾಡಿದ್ದು ಕೇವಲ ಐದು ಸಿನಿಮಾ ಮಾತ್ರ. ಈಗ ಬಿಡುಗಡೆಯಾಗಲಿರುವ ಅವರ ಮಾರ್ಟಿನ್ ಸಿನಿಮಾ ಆರನೆಯ ಸಿನಿಮಾವಾಗಿದ್ದು ಇದೇ ವಾರಂತ್ಯಕ್ಕೆ ಬಿಡುಗಡೆಯಾಗಲಿದೆ. ಇದಲ್ಲದೆ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಕೆಡಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅದಿನ್ನೂ ಶೂಟಿಂಗ್ ಹಂತದಲ್ಲಿದೆ. ಈ ವರ್ಷ ಫುಲ್ ಬ್ಯುಸಿಯಾಗಿರುವ ಧ್ರುವ ಒಟ್ಟೊಟ್ಟಿಗೇ ಎರಡು ಸಿನಿಮಾ ಕೊಡುವ ನಿರೀಕ್ಷೆಯಲ್ಲಿದ್ದಾರೆ.

ಧ್ರುವ ಸರ್ಜಾ ಮತ್ತು ಅಣ್ಣ ಚಿರು ಸರ್ಜಾ ರಾಮ-ಲಕ್ಷ್ಮಣರಂತಿದ್ದರು. ಆದರೆ ಚಿರು ಸರ್ಜಾ 2020 ರಲ್ಲಿ ತೀರಿಕೊಂಡಾಗ ಧ್ರುವ ತೀರಾ ಡಲ್ ಆಗಿದ್ದರು. ಹಾಗಿದ್ದರೂ ಈಗಲೂ ತಮ್ಮ ಜೀವನದ ಪ್ರತೀ ಕ್ಷಣದಲ್ಲೂ ಅಣ್ಣನನ್ನು ನೆನೆಸಿಕೊಳ್ಳುತ್ತಲೇ ಇರುತ್ತಾರೆ. ಚಿರು ಸರ್ಜಾಗಿಂತ ಧ್ರುವ ನಾಲ್ಕು ವರ್ಷ ಚಿಕ್ಕವರು. ಈಗ ಅಣ್ಣನಿಲ್ಲದೇ ಇದ್ದರೂ ತಮ್ಮ ಅಭಿಮಾನಿಗಳಲ್ಲಿ ತಮ್ಮ ಅಣ್ಣನ ಪ್ರೀತಿ ಕಾಣುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ವಿಧಿವಶ

ಜಸ್ಟ್ ಫ್ರೆಂಡ್ಸ್ ಎನ್ನುತ್ತಲೇ ದಾಂಪತ್ಯ ಜೀವನಕ್ಕಿಡಲು ಸಜ್ಜಾದ ಮಾನಸ ಶಿವು ಜೋಡಿ

ಮುಂದಿನ ಸುದ್ದಿ
Show comments