ನಿರೂಪಣೆಗೆ ಗುಡ್‌ಬೈ ಹೇಳಿ ಹೊಸ ಬಿಸಿನೆಸ್ ಶುರು ಮಾಡಿದ ಸುಕನ್ಯಾ ಸಂಪತ್

Sampriya
ಶನಿವಾರ, 5 ಅಕ್ಟೋಬರ್ 2024 (19:50 IST)
Photo Courtesy X
ಮಾಧ್ಯಮ ಲೋಕದಿಂದ ಬ್ರೇಕ್ ಪಡೆದಿರುವ ಟಿವಿ9 ಖ್ಯಾತ ನಿರೂಪಕಿ ಸುಕನ್ಯಾ ಅವರು ಇದೀಗ ಸ್ವಂತ ಬಿಸಿನೆಸ್ ಅನ್ನು ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಹೊಸ ಬಿಸಿನೆಸ್‌ ಬಗ್ಗೆ ಸ್ಟೋರಿ ಹಂಚಿಕೊಳ್ಳುತ್ತಿದ್ದಾರೆ.

ಮಾತೃ ಸಂಸ್ಥೆಯಾದ ಟಿವಿ 9ಗೆ ಜೂನ್‌ ತಿಂಗಳಿನಲ್ಲಿ ವಿದಾಯ ಹೇಳಿರುವ ಸುಕನ್ಯಾ ಅವರು ಇದೀಗ ಟೀ ಪೌಡರ್ ಬಿಸಿನೆಸ್‌ ಅನ್ನು ಆರಂಭಿಸಿದ್ದಾರೆ.ಇದು ಸದ್ಯ ಬೆಂಗಳೂರಿನ ಮಲ್ಲೇಶ್ವರಂನ ವೀಣಾ ಸ್ಟೋರ್‌ನಲ್ಲಿ ತಾನು ತಯಾರಿಸುವ ಸುಕನ್ಯಾ ಸಮೃದ್ಧಿ ಚಹಾ ಲಭ್ಯವಿದೆ ಎಂದು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.

ಅದಲ್ಲದೆ ಬಸವನಗುಡಿಯು ಬೃಂದಾವನ ಸ್ಟೋರ್‌ನಲ್ಲಿ ಲಭ್ಯವಿದೆ ಎಂದು ಹೇಳಿದ್ದಾರೆ.  

ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಹೀಗಿದೆ: ರುಚಿಯಾದ ಘಮಘಮಿಸುವ ಶುದ್ಧ ಚಹಾ..ಅಮೆಜಾನ್ ಲಿ “TEA9“ ಅಂತ type ಮಾಡಿದ್ರೆ Tea9 ನ ಎಲ್ಲಾ ಪ್ರೀಮಿಯಮ್ ಪ್ರಾಡಕ್ಟ್ ಗಳು ಲಭ್ಯ.. ಖರೀದಿಸಿ.. tag ಮಾಡಿ..ನಿಮ್ಮ ಒಂದೊಳ್ಳೆಯ ರಿವ್ಯೂ ಸಿಗಲಿ.. ಬೆಂಬಲ ಸದಾ ಇರಲಿ.. ಧನ್ಯವಾದಗಳು.

ಕರಾವಳಿಯವರು ಆಗಿರುವ ಸುಕನ್ಯಾ ಅವರು ಮಾಧ್ಯಮ ಲೋಕದಲ್ಲಿ ದೊಡ್ಡ ಮಟ್ಟದ ಹೆಸರು ಗಳಿಸಿದ್ದಾರೆ. ಟಿವಿ9 ಸಂಸ್ಥೆಯಲ್ಲಿ ಸುದೀರ್ಘವಾಗಿ ಕೆಲಸ ಮಾಡಿದ ಅವರು ಇದೀಗ ಫ್ಯಾಮಿಲಿ ಜತೆ  ಸಮಯ ಕಳೆಯುತ್ತಿದ್ದಾರೆ. ಆಗಾಗ ವಿದೇಶಕ್ಕೆ ಪ್ರಯಾಣ ಬೆಳೆಸುವ ಇವರು ಅಲ್ಲಿನ ಸುಂದರ ನೋಟಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ವಿಧಿವಶ

ಮುಂದಿನ ಸುದ್ದಿ
Show comments