Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ಬಳಿಕ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ ಇದುವೇ

ಲಾಕ್ ಡೌನ್ ಬಳಿಕ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ ಇದುವೇ
ಬೆಂಗಳೂರು , ಶನಿವಾರ, 7 ನವೆಂಬರ್ 2020 (08:56 IST)
ಬೆಂಗಳೂರು: ಲಾಕ್ ಡೌನ್ ಮುಗಿದ ಬಳಿಕ ಥಿಯೇಟರ್ ಓಪನ್ ಆದರೂ ಹೊಸ ಸಿನಿಮಾಗಳು ಬಿಡುಗಡೆಯಾಗಿಲ್ಲ. ಆದರೆ ಈಗ ಲಾಕ್ ಡೌನ್ ಬಳಿಕ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ ಎನ್ನುವ ಖ್ಯಾತಿಗೆ ಆಕ್ಟ್ 1978 ಪಾತ್ರವಾಗಲಿದೆ.


ಇದಕ್ಕೂ ಮೊದಲು ಪುರುಸೊತ್ ರಾಮ ಎನ್ನುವ ಸಿನಿಮಾ ಬಿಡುಗಡೆಯಾಗುವುದಾಗಿ ಘೋಷಣೆಯಾಗಿತ್ತು. ಆದರೆ ಬಿಡುಗಡೆಯಾಗಿರಲಿಲ್ಲ. ಅದರ ಬದಲು ಥಿಯೇಟರ್ ಗಳಲ್ಲಿ ಈ ಹಿಂದೆ ಬಿಡುಗಡೆಯಾದ ಸಿನಿಮಾಗಳೇ ಮತ್ತೆ ರಿಲೀಸ್ ಆಗುತ್ತಿದ್ದವು. ಇದೀಗ ಆಕ್ಟ್ 1978 ಸಿನಿಮಾ ನವಂಬರ್ 20 ರಂದು ಬಿಡುಗಡೆಯಾಗುತ್ತಿರುವುದಾಗಿ ಚಿತ್ರತಂಡ ಘೋಷಿಸಿದೆ. ಹೀಗಾಗಿ ಸದ್ಯದ ಮಟ್ಟಿಗೆ ಹೇಳುವುದಾದರೆ ಇದುವೇ ಮೊದಲ ಸಿನಿಮಾ. ಇನ್ನು, ಈ ಸಿನಿಮಾದಲ್ಲಿ ಯಜ್ಞಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಟ್ರೈಲರ್ ಈಗಾಗಲೇ ಹಿಟ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

2021ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕಮಲ್ ಹಾಸನ್ ಪಕ್ಷ ಮೈತ್ರಿ ಮಾಡಿಕೊಳ್ಳುತ್ತಾ?