Select Your Language

Notifications

webdunia
webdunia
webdunia
webdunia

ನೈಜ ಘಟನೆಗೆ ಹಾಸ್ಯದ ಟಚ್ ನೀಡಿರುವ 'ಆನೆ ಬಲ'

ನೈಜ ಘಟನೆಗೆ ಹಾಸ್ಯದ ಟಚ್ ನೀಡಿರುವ 'ಆನೆ ಬಲ'
ಬೆಂಗಳೂರು , ಶುಕ್ರವಾರ, 28 ಫೆಬ್ರವರಿ 2020 (13:06 IST)
ಮುದ್ದೆ ತಿನ್ನುವ ಸ್ಪರ್ಧೆ ಒಂದು ಜಾನಪದ ಕಲೆ. ಮಂಡ್ಯ ಜಿಲ್ಲೆ ಕಡೆ ಈಗಲೂ ಜಾತ್ರೆಗಳಲ್ಲಿ ಈ ಸ್ಪರ್ಧೆ ನಡೆಯಲಿದೆ. ಇದೆ ವಿಚಾರವನ್ನಿಟ್ಟುಕೊಂಡು ಸೊನಗಹಳ್ಳಿ ರಾಜು ಸಿನಿಮಾವೊಂದನ್ನ ಸಿದ್ಧ ಮಾಡಿದ್ದಾರೆ. ಹಳ್ಳಿ ಸೊಗಡನ್ನ ಸಾರುವ 'ಆನೆ ಬಲ' ಈಗಾಗಲೇ ಎಲ್ಲೆಡೆ ಟಾಕ್ ಕ್ರಿಯೇಟ್ ಮಾಡಿದೆ. ಇದೇ ತಿಂಗಳ 28ರಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.
'ಆನೆ ಬಲ' ರೂರಲ್‌ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಕಥೆ. ಜಾನಪದ ಅಂಶಗಳು ಸಿನಿಮಾದಲ್ಲಿ ಬಹಳಷ್ಟಿದೆ. ರಾಗಿ ಮುದ್ದೆ ತಿನ್ನೋ ಸ್ಪರ್ಧೆಯ ಸುತ್ತ ಈ ಕಥೆಯನ್ನು ತೆಗೆಯಲಾಗಿದೆ. ಇದರ ಜೊತೆಯಲ್ಲಿ ಹಳ್ಳಿಯಲ್ಲಿ ನಡೆಯುವ ಸಾಮಾಜಿಕ ಕೆಲಸಗಳಿಗೆ ನಾಯಕ ಮತ್ತವರ ತಂಡ ಹೇಗೆ ಕೆಲಸ ಮಾಡುತ್ತದೆ ಎಂಬುದು ಸಿನಿಮಾದಲ್ಲಿದೆ. ಈಗಾಗಲೇ ಟ್ರೇಲರ್ ರಿಲೀಸ್ ಆಗಿದ್ದು ಸಖತ್ ಸದ್ದು ಮಾಡುತ್ತಿದೆ.
webdunia
ನೆಲ, ಜಲ, ತನ್ನೂರು, ತನ್ನ ಜನ ಅಂತ ನಾಯಕ ಹೆಚ್ಚು ಅದಕ್ಕೆ ಒತ್ತು ಕೊಡುತ್ತಾನೆ. ಜಾನಪದ, ಹಳ್ಳಿ ಜೀವನ, ಸಂಸ್ಕೃತಿಗೆ ಅಲ್ಲಿ ಹೆಚ್ಚು ಪ್ರಾಮುಖ್ಯತೆ ಅಲ್ಲಿ ಎದ್ದು ಕಾಣುತ್ತದೆ. ಗ್ರಾಮೀಣ ಭಾಗದಲ್ಲಿನ ಒಳ ನೋಟಗಳಿಗೆ ಹೆಚ್ಚು ಫೋಕಸ್ ಮಾಡಿರುವ ಸೂನಗನಹಳ್ಳಿ ರಾಜು, ಮೊದಲ ಬಾರಿಗೆ ರಾಗಿ ಮುದ್ದೆ ಮೇಲೆ ಸಿನಿಮಾ ಮಾಡಿರುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಎಲ್ಲೂ ವೈಭೋಪೇತ, ಆಡಂಬರ ಎನಿಸದೆ ಕ್ಯಾಂಡಿಡ್ ರೀತಿಯಲ್ಲಿ ಸಿನಿಮಾ ಚಿತ್ರೀಕರಿಸಲಾಗಿದೆ. ಇದೇ ತಿಂಗಳ 28 ಕ್ಕೆ ರಿಲೀಸ್ ಆಗುತ್ತಿದ್ದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.
webdunia
ಛಾಯಾಗ್ರಹಣ ಜೆ.ಟಿ. ಬೆಟ್ಟೇಗೌಡ ಕೀಲಾರ ಅವರದು. ಗೌತಂ, ಚಿರಂಜೀವಿ, ಹರೀಶ್‍ ಶೆಟ್ಟಿ, ಕೀಲಾರ ಉದಯ್, ಸುಮಾ, ರೂಪಾ, ಮುತ್ತುರಾಜು ತಾರಾಗಣದಲ್ಲಿ ಇದ್ದಾರೆ.
 
Share this Story:

Follow Webdunia kannada

ಮುಂದಿನ ಸುದ್ದಿ

ಅರ್ಜುನ್ ಜನ್ಯಾ ಅನಾರೋಗ್ಯ ಹಿನ್ನಲೆ: ರಾಬರ್ಟ್ ಸಿನಿಮಾ ಅಡಿಯೋ ರಿಲೀಸ್ ಮುಂದಕ್ಕೆ?