Publish Date: Fri, 28 Feb 2020 (09:21 IST)
Updated Date: Fri, 28 Feb 2020 (09:23 IST)
ಬೆಂಗಳೂರು: ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಹೃದಯಾಘಾತದಿಂದಾಗಿ ಆಸ್ಪತ್ರೆ ಸೇರಿರುವ ಹಿನ್ನಲೆಯಲ್ಲಿ ರಾಬರ್ಟ್ ಸಿನಿಮಾ ಅಡಿಯೋ ಲಾಂಚ್ ಕಾರ್ಯಕ್ರಮ ಮುಂದೂಡಿಕೆಯಾಗುವ ಸಾಧ‍್ಯತೆಯಿದೆ.
ಅರ್ಜುನ್ ಜನ್ಯಾಗೆ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಂಜಿಯೋಪ್ಲಾಸ್ಟಿಗೊಳಗಾಗಿರುವ ಜನ್ಯಾ ಸದ್ಯಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಆದರೆ ಕೆಲವು ದಿನಗಳ ಮಟ್ಟಿಗೆ ಅವರಿಗೆ ವಿಶ್ರಾಂತಿ ಅಗತ್ಯವಿದೆ. ಆದರೆ ಇದೇ ತಿಂಗಳ ಅಂತ್ಯಕ್ಕೆ ರಾಬರ್ಟ್ ಸಿನಿಮಾದ ಅಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಅವರು ಲೈವ್ ಕನ್ಸರ್ಟ್ ಮಾಡಬೇಕಿತ್ತು. ಆದರೆ ಅನಾರೋಗ್ಯದ ಹಿನ್ನಲೆಯಲ್ಲಿ ಕಾರ್ಯಕ್ರಮ ಮುಂದೂಡಿಕೆಯಾಗುವ ಸಾಧ್ಯತೆಯಿದೆ.