Select Your Language

Notifications

webdunia
webdunia
webdunia
webdunia

ಕಿರಿಕ್ ಪಾರ್ಟಿ 2 ಮಾಡ್ತಾರಂತೆ ರಕ್ಷಿತ್ ಶೆಟ್ಟಿ! ಪಾರ್ಟ್ 2 ಮಾಡಲು ಕಾರಣವೇನು ಗೊತ್ತಾ?!

ಕಿರಿಕ್ ಪಾರ್ಟಿ 2 ಮಾಡ್ತಾರಂತೆ ರಕ್ಷಿತ್ ಶೆಟ್ಟಿ! ಪಾರ್ಟ್ 2 ಮಾಡಲು ಕಾರಣವೇನು ಗೊತ್ತಾ?!
ಬೆಂಗಳೂರು , ಗುರುವಾರ, 27 ಫೆಬ್ರವರಿ 2020 (09:34 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಅದೃಷ್ಟ ತಂದ ಸಿನಿಮಾ ಕಿರಿಕ್ ಪಾರ್ಟಿ. ಈ ಸಿನಿಮಾದ ಎರಡನೇ ಭಾಗ ಮಾಡಲು ರಕ್ಷಿತ್ ಶೆಟ್ಟಿ ನಿರ್ಧರಿಸಿದ್ದಾರಂತೆ! ಅದಕ್ಕೆ ಕಾರಣವೂ ಇಂಟರೆಸ್ಟಿಂಗ್ ಆಗಿದೆ.


ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಬಳಸಿದ ಶಾಂತಿ ಕ್ರಾಂತಿ ಹಾಡಿನ ವಿಚಾರ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದು ರಕ್ಷಿತ್ ವಿರುದ್ಧ ವಾರಂಟ್ ಜಾರಿಯಾಗಿದೆ. ಈ ವಿವಾದ ಒಮ್ಮೆ ಕೋರ್ಟ್ ನಲ್ಲಿ ಇತ್ಯರ್ಥವಾದ ಮೇಲೆ ಮತ್ತೆ ಆ ವಿಚಾರವನ್ನು ಎಳೆದುತರುತ್ತಿರುವುದರಿಂದ ಅಸಮಾಧನಗೊಂಡಿರುವ ರಕ್ಷಿತ್ ಶೆಟ್ಟಿ ಇದೇ ಕಾರಣಕ್ಕೆ ನನಗೀಗ ಕಿರಿಕ್ ಪಾರ್ಟಿ 2 ಮಾಡುವ ಯೋಚನೆ ಮಾಡುತ್ತಿದ್ದಾರಂತೆ!

ನನಗೆ ಇದುವರೆಗೆ ಕಿರಿಕ್ ಪಾರ್ಟಿ  2 ನೇ ಭಾಗ ಮಾಡುವ ಯೋಚನೆಯೇ ಇರಲಿಲ್ಲ. ಆದರೆ ಈ ವಿವಾದಗಳೆಲ್ಲಾ ನೋಡಿದ ಮೇಲೆ ಎರಡನೇ ಭಾಗ ಮಾಡುವ ಯೋಚನೆ ಬರುತ್ತಿದೆ ಎಂದು ರಕ್ಷಿತ್ ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಅಂದ ಹಾಗೆ ಇದನ್ನು ಗಂಭೀರವಾಗಿಯೇ ಹೇಳಿದ್ದೋ ಅಥವಾ ತಮ್ಮ ವಿರುದ್ದ ಕೇಸ್ ದಾಖಲಿಸಿದವರಿಗೆ ಕೊಟ್ಟ ಟಾಂಗ್ ಎಂದೋ ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾಗೆ ಲಘು ಹೃದಯಾಘಾತ