ಬೆಂಗಳೂರು: ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡುತ್ತಿದ್ದ ಹಾಗೇ ಸ್ಯಾಂಡಲ್‌ವುಡ್‌ನ ಅವರ ಆಪ್ತರು ಖುಷಿ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
ನಿರ್ದೇಶಕ ತರುಣ್ ಸುಧೀರ್, ನಟಿ ರಕ್ಷಿತಾ ಪ್ರೇಮ್, ನಟ ಧನ್ವೀರ್, ನಟಿ ಸೋನಲ್ ಮೊಂಥೆರೋ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿದ್ದಾರೆ. ದರ್ಶನ್‌ಗೆ ಸಿಕ್ಕಿರುವ ಬಿಗ್ ರಿಲೀಫ್ ಬಗ್ಗೆ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ದರ್ಶನ್ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ ದಿನದಿಂದಲೂ ದರ್ಶನ್ ಕುಟುಂಬದ ಜತೆಗಿರುವ ನಟ ಧನ್ವೀರ್ ಅವರು ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿ, ಉಸಿರಿರುವವರೆಗೂ ಇರ್ತಿವಿ ನಿಮ್ಮಿಂದ್ದೆ ಎಂದು ಬರೆದುಕೊಂಡಿದ್ದಾರೆ. ಅದರೊಂದಿಗೆ ನಾಡದೇವತೆಗೆ ಕೈ ಮುಗಿದು ಪೋಸ್ಟ್ ಹಾಕಿದ್ದಾರೆ.
ಇನ್ನೂ ತರುಣ್ ಸುಧೀರ್ ಅವರು, ಹನುಮಾನ್ ದೇವರ ಮುಂದೆ ದರ್ಶನ್ ಇರುವ ಪೋಟೋ ಹಾಕಿ ನಾಡಿನ ಸಮಸ್ತ ಜನತೆಗೆ ಶ್ರೀ ಹನುಮ ಜಯಂತಿಯ ಶುಭಾಶಯಗಳು ಎಂದು ಬರೆದಿದ್ದಾರೆ. ಈ ಫೋಟೋಗೆ ರಾಮಾ ನಾಮ ಹಾಡಿರೋ ಹನುಮ ಬರುವನೋ , ಅವನ ಹಿಂದೆ ಹನುಮನು ಇದ್ದೆ ಇರುವನು ಎಂಬ ಹಾಡನ್ನು ಹಾಕಿದ್ದಾರೆ.
ಇನ್ನು ನಟಿ ರಕ್ಷಿತಾ ಪ್ರೇಮ್ ಅವರು ಒಳ್ಳೆಯ ಸುದ್ದಿ, ಖುಷಿಯ ದಿನ ಎಂದು ಬರೆದುಕೊಂಡಿದ್ದಾರೆ.
ನಟಿ ಸೋನಲ್ ಮೊಂಥೆರೋ ಕೂಡಾ ಕಾಟೇರಾ ಮ್ಯೂಸಿಕ್ ಹಾಕಿ ಖುಷಿ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ದರ್ಶನ್ ಅವರಿಗೆ ಈ ಪ್ರಕರಣದಿಂದ ಮುಕ್ತಿ ಸಿಕ್ಕಿರುವುದಕ್ಕೆ ಅವರ ಆಪ್ತ ವಲಯದವರು ಖುಷಿವ್ಯಕ್ತಪಡಿಸುತ್ತಿದ್ದಾರೆ.