Select Your Language

Notifications

webdunia
webdunia
webdunia
webdunia

ಅಂಬಾನಿ ಮನೆಗೆಲಸಗಾರರ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತಿರಿ..!!

ಅಂಬಾನಿ ಮನೆಗೆಲಸಗಾರರ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತಿರಿ..!!

ramkrishna puranik

ಮುಂಬೈ , ಗುರುವಾರ, 4 ಜನವರಿ 2018 (17:53 IST)
ಭಾರತದಲ್ಲಿರುವ ಶ್ರೀಮಂತ ವ್ಯಕ್ತಿಗಳಲ್ಲಿಯೇ ಪ್ರಮುಖರಾಗಿದ್ದಾರೆ ಮುಖೇಶ್ ಅಂಬಾನಿ ಮತ್ತು ಅವರ ಜೀವನ ಶೈಲಿ ಕೂಡ ಅದೇ ರೀತಿ ಇದೆ. ಇಷ್ಟೇ ಅಲ್ಲದೆ, ಈ ವರ್ಷ ಏಷ್ಯಾದಲ್ಲಿ ಶ್ರೀಮಂತ ವ್ಯಕ್ತಿಯಾಗಲು ಶ್ರೀ ಅಂಬಾನಿ ಜ್ಯಾಕ್ ಮಾ ಅವರನ್ನು ಕೂಡಾ ಹಿಂದೆ ಹಾಕಿದ್ದಾರೆ.

ಈ ವ್ಯಾಪಾರ ಉದ್ಯಮಿ ತನ್ನ ಅತಿರಂಜಿತ ಮತ್ತು ಅದ್ದೂರಿ ಜೀವನ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಮುಂಬೈನಲ್ಲಿನ ಇವರ ಮನೆಯನ್ನು ಅಂಟಿಲಿಯಾ ಎಂದು ಕರೆಯುತ್ತಾರೆ.
 
ಮುಖೇಶ್ ಅಂಬಾನಿ ಅವರು ಅದ್ದೂರಿ ಮತ್ತು ಐಷಾರಾಮಿ ಜೀವನ ಶೈಲಿಗಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಐಷಾರಾಮಿ ಜೀವನ ಶೈಲಿಯನ್ನು ಹೇಗೆ ಕಳೆಯಬೇಕು ಎಂದು ಅವರಿಗೆ ತಿಳಿದಿದೆ. ಈ ಕಾರಣಕ್ಕಾಗಿಯೇ ಅವರು ಮಾಧ್ಯಮಗಳಲ್ಲಿ ಹೆಚ್ಚು ಬಿಂಬಿತವಾಗುತ್ತಾರೆ.
 
ಮುಖೇಶ್ ಅಂಬಾನಿ ಅವರು ಮುಂಬೈನಲ್ಲಿ ವಾಸಿಸುವ ಮನೆಗೆ ಅಂಟಿಲಿಯಾ ಎಂದು ಹೆಸರು. ಇದು ಬಕಿಂಗ್‌ಹ್ಯಾಮ್ ಅರಮನೆಯ ನಂತರದ ವಿಶ್ವದ ಅತ್ಯಂತ ದುಬಾರಿ ವಸತಿ ಗೃಹವಾಗಿದೆ, ಇದರ ಮೌಲ್ಯ 1 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚಾಗಿದೆ. ಇದು ವಿಶ್ವದ ಅತ್ಯಂತ ದುಬಾರಿ ಖಾಸಗಿ ಆಸ್ತಿಯಾಗಿದೆ. ಈ ಮನೆ ಅಲ್ಟಮೌಂಟ್ ರಸ್ತೆ, ಕಂಬಲ್ಲಾ ಹಿಲ್, ಮುಂಬೈನಲ್ಲಿದೆ. ಈ ಕಟ್ಟವು ಸೌಂದರ್ಯ ಮತ್ತು ಶೈಲಿಗೆ ಮಾದರಿಯಾಗಿದೆ. ಅದರ ಕೆಲವು ವಿಶಿಷ್ಟ ವಿಷಯಗಳು ಈಗಾಗಲೇ ನಮಗೆ ಗೊತ್ತಿದೆ. ಅಂತರ್ಜಾಲದಲ್ಲಿ ಈ ಮನೆಯ ಕುರಿತು ಎಲ್ಲಾ ಮಾಹಿತಿಯೂ ನಿಮಗೆ ಸಿಗುತ್ತದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ಪ್ರಮಾಣ 8 ಇದ್ದರೂ ಈ ಕಟ್ಟಡವು ಅದನ್ನು ತಡೆದುಕೊಳ್ಳುವ ಶಕ್ತಿ ಹೊಂದಿದೆ.
 
ಅಂಟಿಲಿಯಾ ತನ್ನ ವಿನ್ಯಾಸ ಮತ್ತು ಒಂದೇ ಕುಟುಂಬದ ಆಡಂಬರದ ಬಳಕೆಗಾಗಿ ಹಲವಾರು ವಿವಾದಗಳನ್ನು ಎದುರಿಸಿದೆ. ಈ ಕಟ್ಟಡದ ಬೆಲೆ ಮತ್ತು ಬಳಕೆಯ ಕುರಿತು ಪ್ರಪಂಚದಾದ್ಯಂತ ಇದು ಬಹಳ ಪ್ರಸಿದ್ಧಿ ಪಡೆದಿದೆ. ಭಾರತದ ಶ್ರೀಮಂತ ವ್ಯಕ್ತಿಯ ಈ ಮನೆಯು ಹೆಚ್ಚಿನ ಎತ್ತರದ ಛಾವಣಿಯೊಂದಿಗೆ 27 ಮಹಡಿಗಳನ್ನು ಹೊಂದಿದೆ. ಮನೆಯನ್ನು ಆರೈಕೆ ಮಾಡುವ ಮತ್ತು ಸಂಘಟಿಸುವ ಒಟ್ಟಾರೆ ಕೆಲಸಗಾರರ ಸಂಖ್ಯೆ 600.
 
600 ಎಂದರೆ ಸ್ವಲ್ಪ ಹೆಚ್ಚಾಯಿತು ಎಂದು ನಿಮಗೆ ಅನ್ನಿಸಬಹುದು, ಆದರೆ, ನೀವು ಮನೆಯನ್ನು ಪರಿಗಣಿಸಿದರೆ ಅದು ಸೂಕ್ತವೆಂದು ತೋರುತ್ತದೆ. ಅವರು ತಮ್ಮದೇ ಆದ ಬಾಣಸಿಗರು, ವ್ಯಾಯಾಮ ಶಾಲೆ, ಸ್ಪಾ ಮತ್ತು ತಮ್ಮ ದುಬಾರಿ ಕಾರುಗಳಿಗಾಗಿ ಪಾರ್ಕಿಂಗ್ ಸ್ಥಳಗಳು, ಈಜು ಕೊಳಗಳು, ಹೆಲಿಪ್ಯಾಡ್‌ಗಳು ಮತ್ತು ಇನ್ನಷ್ಟು ಸೌಕರ್ಯಗಳನ್ನು ಹೊಂದಿದ್ದಾರೆ. ಆದರೆ ನಾವು ಈ ಎಲ್ಲ ವಿಷಯಗಳ ಕುರಿತು ಹೇಳಲು ಎದುರು ನೋಡುತ್ತಿಲ್ಲ.
 
ನಿಮಗೆ ಮುಖೇಶ್ ಅಂಬಾನಿ ಅವರ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಸಂಬಳದ ಕುರಿತು ತಿಳಿದುಕೊಳ್ಳುವ ಕುತೂಹಲವಿದೆಯೇ? ಅವರ ಮನೆಯಲ್ಲಿ ಒಬ್ಬ ಕೆಲಸಗಾರ ಎಷ್ಟು ಸಂಪಾದಿಸುತ್ತಾನೆ ಎಂಬುದನ್ನು ನೀವು ತಿಳಿದುಕೊಂಡರೆ ಅಚ್ಚರಿಯಾಗುವುದಂತೂ ಖಂಡಿತ. ಅವರು ಈ ದೇಶದಲ್ಲಿರುವ ಒಬ್ಬ ಇಂಜಿನಿಯರ್ ಮತ್ತು ಎಂಬಿಎ ಪದವಿಧರರಿಗಿಂತಲೂ ಹೆಚ್ಚು ಗಳಿಸುತ್ತಾರೆ. ಮನೆಯಲ್ಲಿರುವ ಕೆಲಸಗಾರರು ಸರ್ಕಾರಿ ಸೇವಕರಿಗಿಂತ ಕಡಿಮೆ ಏನಿಲ್ಲ, ಅವರು ಈ ಮನೆಯಲ್ಲಿ ಕೆಲಸ ಮಾಡಲು ವಿಶೇಷ ಕೌಶಲ್ಯಗಳನ್ನು ಹೊಂದಿರಬೇಕು.
 
ಅವರ ಸಂಬಳಗಳು ವಿಮೆ, ಶಿಕ್ಷಣ ಮತ್ತು ಹೆಚ್ಚಿನವುಗಳಂತಹ ವಿವಿಧ ಭತ್ಯೆಗಳನ್ನು ಒಳಗೊಂಡಿರುತ್ತವೆ. ಈ ಕೆಲಸಗಾರರ ಕುರಿತು ಒಂದು ಅಚ್ಚರಿಯ ವಿಷಯವೇನೆಂದರೆ ಇವರನ್ನು ಸೇವಕರಿಗಿಂತ ಕುಟುಂಬದ ಸದಸ್ಯರಂತೆ ಪರಿಗಣಿಸಲಾಗುತ್ತದೆ. ಕುಟುಂಬದ ಎಲ್ಲ ಸದಸ್ಯರೂ ಅವರನ್ನು ಗೌರವದಿಂದ ಕಾಣುತ್ತಾರೆ.
 
ಪ್ರಸ್ತುತವಾಗಿ, ಅಂಬಾನಿ ಮನೆಯಲ್ಲಿ ಕೆಲಸ ಮಾಡುವ ಉದ್ಯೋಗಿ ತಿಂಗಳಿಗೆ 2 ಲಕ್ಷ ರೂಗಳನ್ನು ಗಳಿಸುತ್ತಾನೆ. ಅದು ಅವರ ಕೆಲಸದ ಜವಾಬ್ದಾರಿಯ ಮೇಲೆ ಅವಲಂಬಿತವಾಗಿರುತ್ತದೆ. ಈ ಮೊದಲು 2011 ರಲ್ಲಿ ಅವರ ಕನಿಷ್ಠ ವೇತನ 6,000 ರೂಪಾಯಿಗಳಿತ್ತು. ಆದರೆ, ಈಗ ಕನಿಷ್ಠ ವೇತನ 2 ಲಕ್ಷ ರೂಪಾಯಿಗಳಾಗಿದೆ. 
 
ಅಂಟಿಲಿಯಾ ಮನೆಯು ಝೆಡ್ ಶ್ರೇಣಿಯ ಭದ್ರತೆಯನ್ನು ಒಳಗೊಂಡಿದೆ, ಅದಕ್ಕಾಗಿ 15 ಲಕ್ಷ ರೂಪಾಯಿಗಳನ್ನು ಪಾವತಿಸುತ್ತಾರೆ. ಸಾಮಾನ್ಯವಾಗಿ, ಭಯೋತ್ಪಾದಕ ಬೆದರಿಕೆ ಹೊಂದಿರುವ ವ್ಯಕ್ತಿಯು ಭಾರತದ ಗೃಹ ಸಚಿವಾಲಯದಿಂದ ಅನುಮತಿ ಪಡೆದಾಗ ಮಾತ್ರ ಝೆಡ್ ಶ್ರೇಣಿಯ ಭದ್ರತೆಯನ್ನು ಒಬ್ಬ ವ್ಯಕ್ತಿಗೆ ಒದಗಿಸಲಾಗುತ್ತದೆ.
 
ಈ ಮನೆಯು ಧನಾತ್ಮಕ ಮತ್ತು ಋಣಾತ್ಮಕವಾದ ಎರಡೂ ರೀತಿಯ ಪ್ರಚಾರಗಳನ್ನು ಗಳಿಸಿದೆ. ಭಾರತದಲ್ಲಿ ಕೆಲವರು ಈ ಕಟ್ಟಡದ ಬಗ್ಗೆ ಹೆಮ್ಮೆ ಪಡುತ್ತಾರೆ, ಆದರೆ ಕೆಲವರು ದ್ವೇಷಿಸುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

21 ಕೊಲೆಯಾದವು, ಇನ್ನೆಷ್ಟು ಕೊಲೆಯಾಗಬೇಕು– ಪ್ರತಾಪಸಿಂಹ ಪ್ರಶ್ನೆ