Select Your Language

Notifications

webdunia
webdunia
webdunia
webdunia

ಅಮೆಜಾನ್, ಫ್ಲಿಪ್ ಕಾರ್ಟ್ ವಿರುದ್ಧ 16 ವರ್ಷದ ಬಾಲಕನೊಬ್ಬ ದೂರು ನೀಡಿದ್ದೇಕೆ?

ಅಮೆಜಾನ್, ಫ್ಲಿಪ್ ಕಾರ್ಟ್ ವಿರುದ್ಧ 16 ವರ್ಷದ ಬಾಲಕನೊಬ್ಬ ದೂರು ನೀಡಿದ್ದೇಕೆ?
ನವದೆಹಲಿ , ಶುಕ್ರವಾರ, 18 ಅಕ್ಟೋಬರ್ 2019 (09:45 IST)
ನವದೆಹಲಿ : ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಇ-ಕಾಮರ್ಸ್ ಕಂಪೆನಿಗಳು ವಸ್ತುಗಳನ್ನು ಪ್ಯಾಕ್ ಮಾಡಲು ಬಳಸುವ ಪ್ಲಾಸ್ಟಿಕ್ ನ್ನು ನಿಷೇಧಿಸುವಂತೆ 16 ವರ್ಷದ ಬಾಲಕನೊಬ್ಬ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ದೂರು ನೀಡಿದ್ದಾನೆ.




ದೆಹಲಿಯ ನಿವಾಸಿ 11ನೇ ತರಗತಿಯಲ್ಲಿ ಓದುತ್ತಿರುವ ಆದಿತ್ಯ ದುಬೆ ಅಮೆಜಾನ್, ಪ್ಲಿಪ್ ಕಾರ್ಟ್ ಸೇರಿದಂತೆ ಇ-ಕಾಮರ್ಸ್ ಕಂಪೆನಿಗಳು ತಮ್ಮ ವಸ್ತುಗಳನ್ನು ಡೆಲಿವರಿ ಪ್ಯಾಕ್ ಮಾಡಲು ಹೆಚ್ಚು ಪ್ಲಾಸ್ಟಿಕ್ ನ್ನು ಬಳಸುತ್ತಿವೆ. ಇದರಿಂದ ಪರಿಸರಕ್ಕೆ ಹಾನಿಯಾಗುತ್ತಿದೆ ಎಂದು ದೂರು ನೀಡಿದ್ದಾನೆ.


ಪ್ಲಾಸ್ಟಿಕ್ ಬಳಕೆ ನಿಷೇಧಿಸುವಂತೆ ಅಮೆಜಾನ್, ಪ್ಲಿಪ್ ಕಾರ್ಟ್ ಗೆ ಟ್ವೀಟ್ ಮಾಡಿದ ಈತ ಆ ಟ್ವೀಟ್ ಗೆ ಕಂಪೆನಿಗಳು ಪ್ರತಿಕ್ರಿಯೆ ನೀಡದ ಹಿನ್ನಲೆಯಲ್ಲಿ ಇದೀಗ  ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ದೂರು ನೀಡಿದ್ದಾನೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ಲೇಸ್ಟೋರ್ ನಲ್ಲಿರುವ ಈ ಆ್ಯಪ್ ಗಳಲ್ಲಿದೆಯಂತೆ ಮಾಲ್ವೇರ್ ವೈರಸ್