Publish Date: Sat, 21 Sep 2019 (05:52 IST)
Updated Date: Sat, 21 Sep 2019 (05:55 IST)
ನವದೆಹಲಿ : ವಾಟ್ಸ್ ಆಯಪ್ ಸ್ಟೇಟಸ್ ನಲ್ಲಿ ಫೇಸ್ ಬುಕ್ ಶೇರ್ ಆಯ್ಕೆಯೊಂದನ್ನು ಪರಿಚಯಿಸುವುದರ ಮೂಲಕ ವಾಟ್ಸಾಪ್ ಆಂಡ್ರಾಯ್ಡ್ ಬಳಕೆದಾರರಿಗೆ ಫೇಸ್ಬುಕ್ ಖುಷಿ ಸುದ್ದಿ ನೀಡಿದೆ.
ಇನ್ಸ್ಟ್ರಾಗ್ರಾಮ್ ಸ್ಟೋರಿಗಳನ್ನು ಫೇಸ್ಬುಕ್ ಸ್ಟೋರಿ ಜೊತೆ ಹಂಚಿಕೊಳ್ಳುವ ಆಯ್ಕೆ ಈ ಹಿಂದೆಯೇ ಇತ್ತು. ಆದರೆ ವಾಟ್ಸಾಪ್ ಸ್ಟೇಟಸ್ ಹಾಗೂ ಫೇಸ್ಬುಕ್ ಸ್ಟೋರಿಯನ್ನು ಬೇರೆ ಬೇರೆಯಾಗಿ ಹಂಚಿಕೊಳ್ಳಬೇಕಿತ್ತು. ಆದರೆ ಈಗ ವಾಟ್ಸ್ ಆಯಪ್ ಸ್ಟೇಟಸ್ನಲ್ಲಿ ಹಾಕುವ ಸ್ಟೋರಿಯನ್ನು ನೇರವಾಗಿ ಫೇಸ್ ಬುಕ್ ನಲ್ಲೂ ಶೇರ್ ಮಾಡುವ ಆಯ್ಕೆಯನ್ನು ಬಳಕೆದಾರರಿಗೆ ಪರಿಚಯಿಸಿದೆ.
ವಾಟ್ಸ್ಆಯಪ್ ಸ್ಟೇಟಸ್ ಅನ್ನು ಫೇಸ್ಬುಕ್ ಶೇರ್ ಮಾಡುವ ವಿಧಾನ ಹೀಗಿದೆ:
ಮೊದಲಿಗೆ ವಾಟ್ಸ್ಆಯಪ್ ಸ್ಟೇಟಸ್ ಆಯ್ಕೆಯನ್ನು ಕ್ಕಿಕ್ ಮಾಡಿ. ಬಳಿಕ ಸ್ಟೇಟಸ್ ಪಕ್ಕದಲ್ಲಿ ಕಾಣುವ ಮೂರು ಚುಕ್ಕಿಗಳ ಆಷ್ಷನ್ ಅನ್ನು ಆಯ್ಕೆ ಮಾಡಿ, ಅದರಲ್ಲಿ ಶೇರ್ ಟು ಫೇಸ್ ಬುಕ್ ಆಯ್ಕೆಯನ್ನು ಕ್ಲಿಕ್ ಮಾಡಿ. ಆಗ ನಿಮ್ಮ ಫೇಸ್ ಬುಕ್ ಖಾತೆ ಸಿಗುತ್ತದೆ. ಅಲ್ಲಿ ಶೇರ್ ನೌ ಆಯ್ಕೆಯನ್ನು ಕ್ಕಿಕ್ ಮಾಡಿ. ನಂತರ ವಾಟ್ಸ್ಆಯಪ್ ಸ್ಟೇಟಸ್ ಫೇಸ್ ಬುಕ್ ಗೆ ಶೇರ್ ಆಗುತ್ತದೆ.