ಭಾರತದಲ್ಲಿ ಜಪಾನ್ ನ ಮಿನಿಸೋ ಉತ್ಪನ್ನಗಳ ಮಾರಾಟಕ್ಕೆ ಮುಂದಾದ ಫ್ಲಿಪ್ಕಾರ್ಟ್

ಮಂಗಳವಾರ, 17 ಸೆಪ್ಟಂಬರ್ 2019 (08:49 IST)
ನವದೆಹಲಿ : ಆನ್ ಲೈನ್ ಮಾರಾಟ ಮಳಿಗೆಗಳಗೆ ಸೆಡ್ಡು ಹೊಡೆಯಲು ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಜಪಾನ್ ಸಂಸ್ಥೆ ಮಿನಿಸೋ ಇಂಡಿಯಾ ಜೊತೆಗೆ ಪಾಲುದಾರಿಕೆ ಮಾಡಿಕೊಳ್ಳಲು ನಿರ್ಧರಿಸಿದೆ.
ಭಾರತದಲ್ಲಿ ದಸರಾ, ದೀಪಾವಳಿ ಸೇರಿದಂತೆ ಹಲವು ಹಬ್ಬಗಳು ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಗ್ರಾಹಕರನ್ನು ಸೆಳೆಯಲು ಭಾರತದಲ್ಲಿ ಮಿನಿಸೋ ಉತ್ಪನ್ನಗಳ ಮಾರಾಟಕ್ಕೆ ಫ್ಲಿಪ್ಕಾರ್ಟ್ ಮುಂದಾಗಿದ್ದು ಅದಕ್ಕಾಗಿ ಮಿನಿಸೋ ಇಂಡಿಯಾ ಜೊತೆಗೆ ಪಾಲುದಾರಿಕೆ ಮಾಡಿಕೊಳ್ಳುತ್ತಿರುವುದಾಗಿ ಫ್ಲಿಪ್ಕಾರ್ಟ್ ಪ್ರಕಟಿಸಿದೆ.


ಗೃಹೋಪಯೋಗಿ ವಸ್ತುಗಳಿಂದ ಹಿಡಿದು, ಇತರ ಎಲ್ಲಾ ಉತ್ಪನ್ನಗಳನ್ನೂ ಫ್ಲಿಪ್ಕಾರ್ಟ್ ಮೂಲಕ ಮಿನಿಸೋ ಮಾರಾಟ ಮಾಡಲಿದೆ. ಈ ಮೂಲಕ ಟೈರ್ 2 ಹಾಗೂ ಟೈರ್ 3 ನಗರಗಳ ಗ್ರಾಹಕರನ್ನೂ ಸೆಳೆಯುವುದು ಮಿನಿಸೋ ಉದ್ದೇಶವಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ‘ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸಾವಿರಾರು ಸರಕಾರಿ ಹುದ್ದೆಗಳು ಖಾಲಿ’