Select Your Language

Notifications

webdunia
webdunia
webdunia
webdunia

ಬಳಕೆದಾರರ ಹಿತದೃಷ್ಟಿಯಿಂದ ಫೇಸ್​ ಬುಕ್​ ಪರಿಚಯಿಸುತ್ತಿದೆ ಡಾರ್ಕ್​ ಮೋಡ್​​ ಆಯ್ಕೆ

ಬಳಕೆದಾರರ ಹಿತದೃಷ್ಟಿಯಿಂದ ಫೇಸ್​ ಬುಕ್​ ಪರಿಚಯಿಸುತ್ತಿದೆ ಡಾರ್ಕ್​ ಮೋಡ್​​ ಆಯ್ಕೆ
ನವದೆಹಲಿ , ಗುರುವಾರ, 15 ಆಗಸ್ಟ್ 2019 (08:22 IST)
ನವದೆಹಲಿ : ಫೇಸ್​ಬುಕ್​ ತನ್ನ ಬಳಕೆದಾರರ ಹಿತದೃಷ್ಟಿಯಿಂದ ಡಾರ್ಕ್​ ಮೋಡ್​​ ಆಯ್ಕೆಯನ್ನು ಪರಿಚಯಿಸಲು ನಿರ್ಧಾರ ಮಾಡಿದೆ.




ಬಳಕೆದಾರ ಕಣ್ಣಿನ ಹಿತದೃಷ್ಠಿಯಿಂದ ಹಾಗೂ ಬ್ಯಾಟರಿ ಉಳಿಕೆಯ ಉದ್ದೇಶದಿಂದ ಡಾರ್ಕ್​ ಮೋಡ್​ ಆಯ್ಕೆಯನ್ನು ತರಲಾಗುತ್ತಿದೆ. ಗೂಗಲ್​ ಹೊಸ ಆಂಡ್ರಾಯ್ಡ್​ ಆಪರೇಟಿಂಗ್​ ಸಿಸ್ಟಂಮ್​ನಲ್ಲಿ ಡಾರ್ಕ್​ ಮೋಡ್​ ಪರಿಚಯಿಸಲಾಗುತ್ತಿದೆ. ಅಂತೆಯೇ, ಆಯಪಲ್​ ಐಒಎಸ್​ 13 ರಲ್ಲಿ ಕೂಡ ಡಾರ್ಕ್​ ಮೋಡ್​ ಲಭ್ಯವಾಗುತ್ತಿದೆ.


ಹೀಗಾಗಿ ಫೇಸ್​ಬುಕ್​ ಕೂಡ ಡಾರ್ಕ್​ ಮೋಡ್​ ಅನ್ನು ಪರಿಚಯಿಸಲು ಮುಂದಾಗಿದೆ. ಫೇಸ್​ಬುಕ್​ ​ ಮೆಸೆಂಜರ್​ ಡಾರ್ಕ್​ಮೋಡ್​ ಆಯ್ಕೆಯನ್ನು ಈ ಮೊದಲೇ ಬಿಡಲಾಗಿದೆ. ಇದೀಗ ಆಂಡ್ರಾಯ್ಡ್​​ ಬಳಕೆದಾರರಿಗೆ ಈ ಸೌಲಭ್ಯವನ್ನು ಕಲ್ಪಿಸಲು ಮುಂದಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸ್ವಾತಂತ್ರ್ಯೋತ್ಸವ ಹಿನ್ನಲೆ; ಇಂದು 9 ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪರಿಂದ ಧ್ವಜಾರೋಹಣ