ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಕಳೆದ ವರ್ಷ 3.60 ಲಕ್ಷ ಕೋಟಿ ರು.ಗೆ ಟ್ವೀಟರ್ ಖರೀದಿ ಮಾಡಿದ್ದರು. ಖರೀದಿ ಬಳಿಕ ಅದರಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತಂದಿದ್ದರು. ಈ ಪೈಕಿ ಬಹುತೇಕ ನಿರ್ಧಾರಗಳು ಬಳಕೆದಾರರ ಟೀಕೆಗೆ, ವಿವಾದಕ್ಕೆ ಗುರಿಯಾಗಿತ್ತು.
ವಿವಾದದ ಹಿನ್ನೆಲೆಯಲ್ಲಿ ಬಹುತೇಕ ಜಾಹೀರಾತುದಾರರು ಕಂಪನಿಯಿಂದ ಹಿಂದೆ ಸರಿದಿದ್ದು,ಶೇ50 ರಷ್ಟು ನಷ್ಟವಾಗಿದೆ ಅಂತ ಮೂಲಗಳಿಂದ ತಿಳಿದು ಬಂದಿದೆ.