Publish Date: Tue, 25 Jul 2023 (08:57 IST)
Updated Date: Tue, 25 Jul 2023 (10:33 IST)
ವಾಷಿಂಗ್ಟನ್ : ಜನಪ್ರಿಯ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ನ ಲೋಗೋ ಇದೀಗ ಅಧಿಕೃತವಾಗಿ ಬದಲಾವಣೆಯಾಗಿದೆ. ವರ್ಷಗಳ ಐಕಾನಿಕ್ ನೀಲಿ ಬಣ್ಣದ ಹಕ್ಕಿ ಇದೀಗ ಮಾಯವಾಗಿದ್ದು, ಎಕ್ಸ್ (ಘಿ) ಲೋಗೋ ಇದೀಗ ಕಾಣಿಸಿಕೊಳ್ಳುತ್ತಿದೆ.
ಟ್ವಿಟ್ಟರ್ ಅನ್ನು ಖರೀದಿಸಿರುವ ಎಲೋನ್ ಮಸ್ಕ್ ಅಪ್ಲಿಕೇಶನ್ ಅನ್ನು ರೀಬ್ರ್ಯಾಂಡ್ ಮಾಡುವ ಉದ್ದೇಶದಿಂದ ಅದರ ಲೋಗೋ ಹಾಗೂ ಹೆಸರನ್ನು ಬದಲಿಸಲು ಮುಂದಾಗಿದ್ದಾರೆ. ಎಲೋನ್ ಮಸ್ಕ್ ಸೋಮವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಟ್ವಿಟ್ಟರ್ನ ಪ್ರಧಾನ ಕಚೇರಿಯಲ್ಲಿ ಎಕ್ಸ್ ಬ್ರ್ಯಾಂಡಿಂಗ್ನ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.