Select Your Language

Notifications

webdunia
webdunia
webdunia
webdunia

ಕಂಟೆಂಟ್ ಕ್ರಿಯೇಟರ್ಸ್‌ಗಳಿಗೆ ಟ್ವಿಟ್ಟರ್‌ನಿಂದ ಸಿಗುತ್ತೆ ಭಾರೀ ಹಣ ?

ಕಂಟೆಂಟ್ ಕ್ರಿಯೇಟರ್ಸ್‌ಗಳಿಗೆ ಟ್ವಿಟ್ಟರ್‌ನಿಂದ ಸಿಗುತ್ತೆ ಭಾರೀ ಹಣ ?
ವಾಷಿಂಗ್ಟನ್ , ಶನಿವಾರ, 15 ಜುಲೈ 2023 (07:42 IST)
ವಾಷಿಂಗ್ಟನ್ : ವೆರಿಫೈಡ್ ಟ್ವಿಟ್ಟರ್ ಖಾತೆಗಳನ್ನು ಹೊಂದಿರುವ ಕಂಟೆಂಟ್ ಕ್ರಿಯೇಟರ್ಸ್ಗಳಿಗೆ ಜಾಹೀರಾತು ಆದಾಯದಲ್ಲಿ ಹಣ ನೀಡುವುದಾಗಿ ಟ್ವಿಟ್ಟರ್ ಸಂಸ್ಥೆ ಘೋಷಣೆ ಮಾಡಿದೆ.

ತಮ್ಮ ರಿಪ್ಲೈಗಳಲ್ಲಿ ಪ್ರದರ್ಶಿಸಲಾದ ಜಾಹೀರಾತು ಆದಾಯದಲ್ಲಿ ಕಟೆಂಟ್ ಕ್ರಿಯೇಟರ್ಸ್ಗಳು ಪಾಲನ್ನು ಪಡೆದುಕೊಳ್ಳಲಿದ್ದಾರೆ. ಈ ಸೌಲಭ್ಯಕ್ಕೆ ಅರ್ಹರಾಗಲು ಅವರು ಕಳೆದ 3 ತಿಂಗಳಲ್ಲಿ ತಮ್ಮ ಪೋಸ್ಟ್ಗಳಿಗೆ ಕನಿಷ್ಠ 50 ಲಕ್ಷ ಇಂಪ್ರೆಶನ್ಗಳನ್ನ ಒಳಗೊಂಡಿರಬೇಕು. ಜೊತೆಗೆ ಸ್ಟ್ರೈಪ್ ಪೇಮೆಂಟ್ ಅಕೌಂಟ್ ಅನ್ನು ಸಹ ಹೊಂದಿರಬೇಕಾಗುತ್ತದೆ ಎಂದು ಟ್ವಿಟ್ಟರ್ ಸಂಸ್ಥೆ ತಿಳಿಸಿದೆ.

ಮಾರ್ಕ್ ಜುಕರ್ಬರ್ಗ್ ಒಡೆತನದ ಮೆಟಾ ಸಂಸ್ಥೆ ಟ್ವಿಟ್ಟರ್ಗೆ ಸೆಡ್ಡು ಹೊಡೆಯಲು ಥ್ರೆಡ್ಸ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಈ ಬೆನ್ನಲ್ಲೇ ಟ್ವಿಟ್ಟರ್ ಹೆಚ್ಚು ಕಂಟೆಂಟ್ ಕ್ರಿಯೇಟರ್ಸ್ಗಳನ್ನ ತನ್ನತ್ತ ಸೆಳೆಯಲು ಪ್ಲ್ಯಾನ್ ಮಾಡಿದ್ದು, ಈ ಆಫರ್ ನೀಡಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕಾರು ಪಲ್ಟಿ, ಬಚಾವ್ ಆದ ದಂಪತಿ