Select Your Language

Notifications

webdunia
webdunia
webdunia
webdunia

ಮೊಬೈಲ್ ನ್ನು ಮರೆತು ಬರುವವರಿಗಾಗಿ ಬಂದಿದೆ ಈ ಹೊಸ ಜಾಕೆಟ್

ಮೊಬೈಲ್ ನ್ನು ಮರೆತು ಬರುವವರಿಗಾಗಿ ಬಂದಿದೆ ಈ ಹೊಸ ಜಾಕೆಟ್
ಬೆಂಗಳೂರು , ಮಂಗಳವಾರ, 14 ಮೇ 2019 (07:22 IST)
ಬೆಂಗಳೂರು : ಮೊಬೈಲ್ ನ್ನು ಎಲ್ಲೆಂದರಲ್ಲಿ ಮರೆತು ಬರುವವರಿಗಾಗಿ ಇದೀಗ ಹೊಸ ಜಾಕೆಟ್ ವೊಂದನ್ನು ರೆಡಿ ಮಾಡಲಾಗಿದ್ದು. ಇದನ್ನು ಧರಿಸದರೆ ನೀವು  ಫೋನ್ ಮರೆತು ಹೋದರೆ ನೆನಪಿಸುತ್ತದೆ.



ಹೌದು.  ಗೂಗಲ್​ ಮತ್ತು ಲೆವಿಸ್​​ನ ಕಮ್ಯುಟರ್​ ಎಕ್ಸ್​ ಜಾಕಾರ್ಡ್​ ಜಾಕೆಟ್​ ಈಗ ಇನ್ನಷ್ಟು ಸ್ಮಾರ್ಟ್​ ಆಗಿದೆ. ಈ ಜಾಕೆಟ್​ನಲ್ಲಿ ‘ಆಲ್ವೇಸ್​ ಟುಗೆದರ್​‘(ಸದಾ ಜೊತೆಯಲ್ಲಿ) ಎಂಬ ಹೊಸ ವೈಶಿಷ್ಯವನ್ನು ಪರಿಚಯಿಸಿದೆ. ಈ ನೂತನ ಜಾಕ್ವರ್ಡ್​ ಜಾಕೆಟ್​ನಲ್ಲಿ ಸ್ವಯಂಚಾಲಿತ ಟ್ಯಾಗ್​ ಒಂದನ್ನು ನೀಡಲಾಗಿದೆ. ನಿಮ್ಮ ಸ್ಮಾರ್ಟ್​ಫೋನ್ ಮತ್ತು ಜಾಕೆಟ್​ ನ ನಿಗಮಿತ ಅಂತರ ಹೆಚ್ಚಾದಾಗ ಜಾಕ್ವರ್ಡ್ ಜಾಕೆಟ್​ನಲ್ಲಿರುವ ಟ್ಯಾಗ್​ ಮಿನುಗತೊಡಗುತ್ತದೆ.  ಈ ಮೂಲಕ ನೀವು ಸ್ಮಾರ್ಟ್​ಫೋನ್ ತೆದುಕೊಂಡು ಹೋಗಲು​ ಮರೆತಿರುವುದನ್ನು ನಿಮಿಷಾರ್ಧದಲ್ಲೇ ನೆನಪಿಸುತ್ತದೆ.

 

ಅಲ್ಲದೇ ಈ ಎಲ್ಲಾ ವೈಶಿಷ್ಯವನ್ನು ಪಡೆಯಲು ನೀವು ಜಾಕ್ವರ್ಡ್​ ಆ್ಯಪ್​ ಅನ್ನು ಡೌನ್​ಲೋಡ್​ ಮಾಡಿಕೊಳ್ಳಬೇಕು. ಇದು ಸ್ಮಾರ್ಟ್​ಫೋನ್​ಗೆ ಬರುವ ಕರೆಗಳು, ಸಂದೇಶವನ್ನು ತಿಳಿಸುತ್ತದೆ. ಅಲ್ಲದೇ ಒಂದು ವೇಳೆ ನೀವು ಜಾಕೆಟ್​ ಧರಿಸುವುದನ್ನು ಮರೆತ್ತಿದ್ದರೆ ನಿಮ್ಮ ಸ್ಮಾರ್ಟ್​ಫೋನ್​ ನೋಟಿಫಿಕೇಷನ್​ ಮೂಲಕ ನೆನಪಿಸುತ್ತದೆ. ಈ ಸ್ಮಾರ್ಟ್​ ಜಾಕೆಟ್​ 25,000 ರೂ ಬೆಲೆಗೆ ದೊರಕುತ್ತಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.


 

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಸ್ವತಂತ್ರ ಭಾರತದ ಮೊದಲ ಉಗ್ರ ಹಿಂದೂ ಎಂದ ಕಮಲಹಾಸನ್ ನಾಲಿಗೆ ಕತ್ತರಿಸಿ- ರಾಜೇಂದ್ರ ಬಾಲಾಜಿ