Select Your Language

Notifications

webdunia
webdunia
webdunia
webdunia

ಸದ್ಯದಲ್ಲೇ ಮಾರುಕಟ್ಟೆಗೆ ಬರಲಿವೆ ರೂ.100 ರ ಹೊಸ ಮುಖಬೆಲೆಯ ನೋಟುಗಳು

ಸದ್ಯದಲ್ಲೇ ಮಾರುಕಟ್ಟೆಗೆ ಬರಲಿವೆ ರೂ.100 ರ ಹೊಸ ಮುಖಬೆಲೆಯ ನೋಟುಗಳು
ಬೆಂಗಳೂರು , ಬುಧವಾರ, 18 ಜುಲೈ 2018 (11:55 IST)
ಬೆಂಗಳೂರು : ಭಾರತೀಯ ರಿಸರ್ವ್ ಬ್ಯಾಂಕ್ ರೂ.100 ರ ಹೊಸ ಮುಖಬೆಲೆಯ ನೋಟುಗಳ ಮುದ್ರಣವನ್ನು ಆರಂಭಿಸಿರುವುದಾಗಿ ತಿಳಿದುಬಂದಿದೆ.


ಪ್ರಧಾನಿ ನರೇಂದ್ರ ಮೋದಿಯವರು 2016ರ ನವೆಂಬರ್ 8ರಲ್ಲಿ 500 ಹಾಗೂ 1000 ಮುಖ ಬೆಲೆಯ ನೋಟುಗಳನ್ನು ನಿಷೇಧ ಮಾಡಿದ್ದರು. ಇದಾದ ನಂತರದಲ್ಲಿ ಹೊಸ ಮುಖಬೆಲೆಯ ರೂ. 500, 2000 ರೂಪಾಯಿ ನೋಟುಗಳು ಮಾರುಕಟ್ಟೆಗೆ ಬಂದಿದ್ದವು. ನಂತರ ಆರ್ ಬಿಐ ರೂ. 10, 20, 50 ಹಾಗೂ 200 ರೂಪಾಯಿ ಹೊಸ ನೋಟುಗಳನ್ನು ಮುದ್ರಿಸಿ ಮಾರುಕಟ್ಟೆಗೆ ಬಿಟ್ಟಿತ್ತು.


ಇದೀಗ ರೂ.100 ರ ಹೊಸ ಮುಖಬೆಲೆಯ ನೋಟುಗಳ ಬಿಡುಗಡೆಗೆ ಆರ್ ಬಿಐ ತಯಾರಿ ನಡೆಸುತ್ತಿದೆ. ಹೊಸ ರೂ.100 ಮುಖಬೆಲೆಯ ನೋಟಿನ ಮುದ್ರಣ ಕಾರ್ಯ ದೇವಾಸ್ ಬ್ಯಾಂಕ್ ನೋಟ್ ಪ್ರೆಸ್ ನಲ್ಲಿ ಆರಂಭವಾಗಿದೆ. ಹೋಶಂಗಾಬಾದ್ ನ ಸೆಕ್ಯೂರಿಟಿ ಪೇಪರ್ ಮಿಲ್ ನ ಹೊಸ ನೋಟುಗಳು ಮುದ್ರಣವಾಗುತ್ತಿವೆ. ಈ ನೋಟುಗಳು ಆಗಸ್ಟ್ ಅಂತ್ಯದೊಳಗೆ ನಿಮ್ಮ ಕೈ ಸೇರಲಿವೆ. ಹೊಸ ಮುಖಬೆಲೆಯ ನೋಟುಗಳು ಮಾರುಕಟ್ಟೆಗೆ ಬರುತ್ತಿದ್ದಂತೆಯೇ ಹಳೆಯ ರೂ.100 ನೋಟುಗಳು ಸ್ಥಗಿತವಾಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಕುಮಾರಸ್ವಾಮಿ ಏರ್ಪಡಿಸಿದ ಸಂಸದರ ಸಭೆಗೆ ಆಗಮಿಸುವವರಿಗೆ ‘ಗಿಫ್ಟ್ ವಿವಾದ’