ನವದೆಹಲಿ : ಲೋಕಸಭೆ ಚುನಾವಣೆ ನಡೆಯುತ್ತಿರುವ ಈ ಮಧ್ಯೆಯೇ ಸಾರ್ವಜನಿಕ ವಲಯದ ತೈಲ ಕಂಪನಿಗಳು ಅಡುಗೆ ಅನಿಲ ಬೆಲೆಯಲ್ಲಿ ಏರಿಕೆ ಮಾಡುವುದರ ಮೂಲಕ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ.
ದೇಶಿಯ ಎಲ್ ಪಿಜಿ ಸಿಲಿಂಡರ್ ಬೆಲೆ 6 ರೂಪಾಯಿ ಏರಿಕೆಯಾಗಿದೆ. ಸಬ್ಸಿಡಿ ರಹಿತ ಎಲ್ಪಿಜಿ ಅಡುಗೆ ಅನಿಲದ ಬೆಲೆ 22.5 ರೂಪಾಯಿ ಏರಿಕೆಯಾಗಿದೆ. ಈ ಬೆಲೆ ಮೇ1ರಿಂದ ಜಾರಿಗೆ ಬರಲಿದೆ. ಒಂದು ತಿಂಗಳು ಹೊಸ ದರ ಜಾರಿಯಲ್ಲಿರಲಿದೆ.
ಈ ಮೂಲಕ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ದರ ಇದೀಗ ನವದೆಹಲಿಯಲ್ಲಿ 712.5 ರೂ., ಮುಂಬೈನಲ್ಲಿ 684.50 ರೂ., ಕೋಲ್ಕತಾದಲ್ಲಿ 738.50 ರೂ. ಮತ್ತು ಚೆನ್ನೈನಲ್ಲಿ 728 ರೂ. ಆಗಿದೆ. ಹಾಗೇ ಸಬ್ಸಿಡಿ ಸಹಿತ ಎಲ್ಪಿಜಿ ಸಿಲೆಂಡರ್ ಬೆಲೆ ದೆಹಲಿಯಲ್ಲಿ 496.14 ರೂ., ಕೋಲ್ಕತಾದಲ್ಲಿ 499.29 ರೂ., ಮುಂಬೈನಲ್ಲಿ 493.86 ರೂ. ಮತ್ತು ಚೆನ್ನೈನಲ್ಲಿ 484.02 ರೂ. ಇರಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.