Select Your Language

Notifications

webdunia
webdunia
webdunia
webdunia

ಖರ್ಗೆಗೆ ಚುನಾವಣಾ ಆಯೋಗದಿಂದ ರೆಡ್ ಸಿಗ್ನಲ್

ಖರ್ಗೆಗೆ ಚುನಾವಣಾ ಆಯೋಗದಿಂದ ರೆಡ್ ಸಿಗ್ನಲ್
ಕಲಬುರ್ಗಿ , ಬುಧವಾರ, 1 ಮೇ 2019 (18:08 IST)
ಶಾಸಕರ ಸಭೆ ಕರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವರೊಬ್ಬರು ಮಾಡಿಕೊಂಡ ಮನವಿಗೆ ಚುನಾವಣಾ ಆಯೋಗ ರೆಡ್ ಸಿಗ್ನಲ್ ನೀಡಿದೆ.

ಕಲಬುರ್ಗಿ ಜಿಲ್ಲೆಯಲ್ಲಿ ತೀವ್ರಗೊಂಡಿದೆ ಬರ ಪರಿಸ್ಥಿತಿ. ಜಿಲ್ಲೆಯ ಏಳೂ ತಾಲೂಕುಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಶಾಸಕರ ಸಭೆ ಕರೆಯುವಂತೆ ಆಯೋಗಕ್ಕೆ ಸಚಿವ ಮನವಿ ಮಾಡಿಕೊಂಡಿದ್ರು. ಆದರೆ ಲೋಕಸಭೆ ಚುನಾವಣೆ ಹಾಗೂ ಚಿಂಚೋಳಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಸಭೆ ನಡೆಸಲು ಅನುಮತಿ ನಿರಾಕರಣೆ ಮಾಡಲಾಗಿದೆ.

ಜಿಲ್ಲೆಯಲ್ಲಿ ತೀವ್ರ ಬರ ಇರೋ ಹಿನ್ನೆಲೆಯಲ್ಲಿ ಶಾಸಕರ ಮತ್ತು ಅಧಿಕಾರಿಗಳ ಸಭೆ ಕರೆಯಲು ಅನಮತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು.

ಆದರೆ ಪ್ರಿಯಾಂಕ್ ಖರ್ಗೆ ಮನವಿಯನ್ನು ತಿರಸ್ಕರಿಸಿದೆ ಚುನಾವಣಾ ಆಯೋಗ. ಉಪ ಮುಖ್ಯ ಚುನಾವಣಾಧಿಕಾರಿ ಹೆಚ್.ಜ್ಞಾನೇಶ್ ಅವರಿಂದ ಕಲಬುರ್ಗಿ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಶಾಸಕರ ಸಭೆ ಕರೆಯಲು ಅವಕಾಶವಿಲ್ಲ ಎಂದಿದ್ದಾರೆ ಜ್ಞಾನೇಶ್. ಬರ ನಿರ್ವಹಣೆಗೆ ತೊಂದರೆಯಾಗದಂತೆ ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಿ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಸೂಚನೆ ನೀಡಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಮಗು ಪಡೆಯುವ ಹಂಬಲದಿಂದ ನಡೆದಿದೆ ಇಂತಹ ಘೋರ ಕೃತ್ಯ