Publish Date: Fri, 13 Apr 2018 (18:50 IST)
Updated Date: Fri, 13 Apr 2018 (18:52 IST)
ನವದೆಹಲಿ: ರಿಲಯನ್ಸ್ ಜಿಯೋ ಫೋನ್ ಗಳ ಜನಪ್ರಿಯತೆಯ ಬಳಿಕ ಇದೀಗ ರಿಲಯನ್ಸ್ ಜಿಯೋ ಲ್ಯಾಪ್ ಟಾಪ್ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.
ಅಗ್ಗದ ದರದ ಫೋನ್ ಜನಪ್ರಿಯವಾದ ರೀತಿಯಲ್ಲೇ ಅಗ್ಗದ ದರದ ಲ್ಯಾಪ್ ಟಾಪ್ ಕೂಡಾ ಜನಪ್ರಿಯತೆ ಪಡೆಯಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ಇದಕ್ಕಾಗಿ ಈಗಾಗಲೇ ಅಮೆರಿಕಾ ಮೂಲದ ಚಿಪ್ ತಯಾರಿಕಾ ಸಂಸ್ಥೆಯೊಂದಿಗೆ ಜಿಯೋ ಒಪ್ಪಂದ ಮಾಡಿಕೊಂಡಿದೆಯಂತೆ.
ನೂತನ ಲ್ಯಾಪ್ ಟಾಪ್ ನಲ್ಲಿ ಇನ್ ಬಿಲ್ಟ್ 4 ಜಿ ಇಂಟರ್ನೆಟ್ ಸೌಲಭ್ಯವಿರಲಿದೆ. ಇದಕ್ಕೆ ಪ್ರತ್ಯೇಕ ವೈಫೈ ಅಥವಾ ಡೇಟಾ ಕಾರ್ಡ್ ಗಳ ಬಳಕೆ ಅಗತ್ಯವಿಲ್ಲ. ರಿಲಯನ್ಸ್ ಜಿಯೋ ಸಿಮ್ ಅಳವಡಿಕೆಗೆ ವ್ಯವಸ್ಥೆ ಕಲ್ಪಿಸಲಾಗುವುದು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.