ನವದೆಹಲಿ: ನಿಮ್ಮ ಬ್ಯಾಂಕ್ ಖಾತೆಗಳಿಗೆ ನಾಮಿನಿ ಮಾಡಿಸಿಲ್ಲವೇ? ಹಾಗಿದ್ದರೆ ಇಂದೇ ಮಾಡಿಸಿ. ಆರ್ ಸಿಬಿ ಹೊಸ ಆದೇಶ ಏನು ಹೇಳುತ್ತದೆ ನೋಡಿ.
ಇನ್ನು ಮುಂದೆ ಎಲ್ಲಾ ರೀತಿಯ ಬ್ಯಾಂಕ್ ಖಾತೆಗಳಿಗೆ ನಾಮಿನಿ ಮಾಡಿಸುವುದು ಕಡ್ಡಾಯ. ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕ್ ಗಳಿಗೆ ನಿರ್ದೇಶನ ನೀಡಿದೆ. ಹಲವು ಬ್ಯಾಂಕ್ ಖಾತೆಗಳಿಗೆ ನಾಮಿನಿಯೇ ಇಲ್ಲ ಎಂದು ಬ್ಯಾಂಕ್ ಖಾತೆಗಳ ಗಮನಕ್ಕೆ ತಂದಿದೆ.
ಠೇವಣಿದಾರರು ಸಾವನ್ನಪ್ಪಿದಾಗ ಕುಟುಂಬ ಸದಸ್ಯರಿಗೆ ಹಣ ಪಡೆದುಕೊಳ್ಳಲು ಸುಲಭವಾಗಲು ನಾಮಿನಿ ಮಾಡಿಸುವುದು ಅಗತ್ಯವಾಗಿದೆ. ಆದರೆ ರಿಸರ್ವ್ ಬ್ಯಾಂಕ್ ಗಮನಿಸಿದಂತೆ ಹೆಚ್ಚಿನ ಬ್ಯಾಂಕ್ ಖಾತೆಗಳಲ್ಲಿ ನಾಮಿನಿಯೇ ಇಲ್ಲದಿರುವುದು ಕಂಡುಬಂದಿದೆ. ಈ ಹಿನ್ನಲೆಯಲ್ಲಿ ಖಾತೆದಾರರಿಗೆ ಈ ಬಗ್ಗೆ ನಿರ್ದೇಶನ ನೀಡುವಂತೆ ಆರ್ ಬಿಐ ಸೂಚಿಸಿದೆ.
ನಾಮ ನಿರ್ದೇಶನ ಮಾಡುವುದರಿಂದ ಗ್ರಾಹಕರು ಮತ್ತು ಕುಟುಂಬಸ್ಥರಿಗೆ ಆಗುವ ಲಾಭಗಳೇನು ಎಂಬುದರ ಬಗ್ಗೆಯೂ ಬ್ಯಾಂಕ್ ಗಳು ಮನವರಿಕೆ ಮಾಡಿಕೊಡಬೇಕೆಂದು ಸೂಚಿಸಲಾಗಿದೆ. ಇದರಿಂದ ಠೇವಣಿದಾರರ ಸಾವಿನ ನಂತರ ಅವರ ಖಾತೆಯ ಹಣವನ್ನು ಕುಟುಂಬಸ್ಥರು ಕ್ಲೈಮ್ ಮಾಡುವಾಗ ಅನಗತ್ಯ ಗೊಂದಲಗಳು ಇರುವುದಿಲ್ಲ. ಹೀಗಾಗಿ ಇನ್ನು ಮುಂದೆ ಎಲ್ಲಾ ರೀತಿಯ ಬ್ಯಾಂಕ್ ಖಾತೆಗಳಿಗೆ ನಾಮಿನಿ ಕಡ್ಡಾಯವಾಗಿ ಮಾಡಿಸುವಂತೆ ಬ್ಯಾಂಕ್ ಗಳಿಗೆ ನಿರ್ದೇಶನ ನೀಡಲಾಗಿದೆ.