ಬೆಂಗಳೂರು: ಪಿಎಫ್ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ಸುಲಭವಾಗಿ ಚೆಕ್ ಮಾಡಲು ಹೆಚ್ಚು ಕಷ್ಟಪಡಬೇಕಾಗಿಲ್ಲ. ಅದಕ್ಕೆ ನೀವು ಇದೊಂದು ಕೆಲಸ ಮಾಡಿದರೆ ಸಾಕು. ಇಲ್ಲಿದೆ ವಿವರ.
ಪಿಎಫ್ ಖಾತೆದಾರರಿಗೆ ಯುಎಎನ್ ನಂಬರ್ ಕೊಡಲಾಗುತ್ತದೆ. ಯುಎಎನ್ ನಂಬರ್ ಎಂದರೆ ಯೂನಿವರ್ಸಲ್ ಅಕೌಂಟ್ ನಂಬರ್ ಎಂದು ಅರ್ಥ. ಫ್ರಾವಿಡೆಂಟ್ ಫಂಡ್ ಸಂಸ್ಥೆಯಲ್ಲಿ ಎಲ್ಲಾ ಖಾತೆದಾರರಿಗೂ ಈ 12 ಅಂಕಿಯ ನಂಬರ್ ಕೊಡಲಾಗುತ್ತದೆ. ಇದನ್ನು ಜೋಪಾನವಾಗಿಟ್ಟುಕೊಳ್ಳಿ.
ಈ ನಂಬರ್ ಇದ್ದರೆ ನೀವು ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ ಪಿಎಫ್ ಬಗ್ಗೆ ಮಾಹಿತಿ ಪಡೆಯಬಹುದು.ಇದೊಂದು ಸಾರ್ವತ್ರಿಕ ನಂಬರ್ ಆಗಿದೆ.
https://unifiedportal-mem.epfindia.gov.in/memberinterface/ ಎಂಬ ನಿಮ್ಮ ಇಪಿಎಫ್ ಒ ಪೋರ್ಟಲ್ ನಲ್ಲಿ ನಿಮ್ಮ ಯುಎಎನ್ ನಂಬರ್ ಕೊಟ್ಟು ಲಾಗಿನ್ ಆಗಿ. ಮ್ಯಾನೇಜ್ ಮೆಂಟ್ ಟ್ಯಾಬ್ ನಲ್ಲಿ ಡ್ರಾಪ್ ಡೌನ್ ಮೆನುವಿನಿಂದ ಕೆವೈಸಿ ಆಯ್ಕೆ ಮಾಡಿ.
ಮುಂದಿನ ಪುಟದಲ್ಲಿ ಯಾವ ಬ್ಯಾಂಕ್ ಅಕೌಂಟ್ ಲಿಕ್ ಆಗಿದೆ ಎಂದು ತೋರಿಸುತ್ತದೆ. ಈಗ ಲಿಂಕ್ ಮಾಡಬೇಕಾದ ಬ್ಯಾಂಕ್ ಅಕೌಂಟ್ ನಂಬರ್ ಕೊಡಿ. ಬ್ಯಾಂಕ್ ಅಕೌಂಟ್ ನಂಬರ್, ಐಎಫ್ ಎಸ್ ಸಿ ಕೋಡ್ ದೃಢೀಕರಿಸಿ.ಐಎಫ್ಎಸ್ ಸಿ ಟ್ಯಾಬ್ ಚೆಕ್ ಮಾಡಿ ಕ್ಲಿಕ್ ಕೊಡಿ.
ಆಧಾರ್ ಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ. ಈ ಒಟಿಪಿಯನ್ನು ಹಾಕಿ ಬ್ಯಾಂಕ್ ಅಕೌಂಟ್ ವೆರಿಫಿಕಷನ್ ಪ್ರಕ್ರಿಯೆಯಲ್ಲಿದೆ ಎಂದು ಮೆಸೇಜ್ ಬರುತ್ತದೆ.
ನೆನಪಿರಲಿ, ನಿಮ್ಮ ಮಾಹಿತಿಗಳು ರಹಸ್ಯವಾಗಿರಲಿ. ನಿಮ್ಮ ಯುಎಎನ್ ಸಂಖ್ಯೆ, ಪಾಸ್ ವರ್ಡ್, ಖಾತೆ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳದಿರಿ. ಇದರಿಂದ ವಂಚನೆಗಳಾಗುವುದನ್ನು ತಡೆಯಬಹುದು.