Select Your Language

Notifications

webdunia
webdunia
webdunia
webdunia

ಇನ್ನೊಂದು ವರ್ಷಕ್ಕೆ ಯಾವುದೇ ಹೊಸ ಯೋಜನೆ ಇಲ್ಲ: ಹಣಕಾಸು ಸಚಿವೆ ನಿರ್ಮಲಾ

ಇನ್ನೊಂದು ವರ್ಷಕ್ಕೆ ಯಾವುದೇ ಹೊಸ ಯೋಜನೆ ಇಲ್ಲ: ಹಣಕಾಸು ಸಚಿವೆ ನಿರ್ಮಲಾ
ನವದೆಹಲಿ , ಶನಿವಾರ, 6 ಜೂನ್ 2020 (09:20 IST)
ನವದೆಹಲಿ: ಕೊರೋನಾದಿಂದಾಗಿ ದೇಶದೆಲ್ಲೆಡೆ ಆರ್ಥಿಕ ಸಂಕಷ್ಟ ಮನೆ ಮಾಡಿದೆ. ಈ ನಡುವೆ ಕೇಂದ್ರ ಹಣಕಾಸು ಸಚಿವಾಲಯ ಆರ್ಥಿಕ ಪುನಶ್ಚೇತನಕ್ಕೆ ಪ್ಯಾಕೇಜ್ ಘೋಷಣೆ ಮಾಡಿತ್ತು.

 

ಅದರ ಹೊರತಾಗಿ ಈ ಆರ್ಥಿಕ ವರ್ಷದಲ್ಲಿ ಮುಂದೆ ಯಾವುದೇ ಹೊಸ ಯೋಜನೆಗಳನ್ನು ಘೋಷಿಸುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈ ಬಗ್ಗೆ ವಿವಿಧ ಇಲಾಖೆಗಳಿಗೂ ಹಣಕಾಸು ಸಚಿವಾಲಯ ಸೂಚನೆ ನೀಡಿದೆ.

ಆದರೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್, ಆತ್ಮನಿರ್ಭರ ಭಾರತ ಯೋಜನಾ ಮುಂತಾದ ವಿಶೇಷ ಯೋಜನೆಗಳಿಗೆ ಘೋಷಣೆಯಾದ ಪ್ಯಾಕೇಜ್ ಗಳು ಬಿಡುಗಡೆಯಾಗಲಿದೆ ಎಂದು ಸಚಿವಾಲಯ ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲಾ ಶುಲ್ಕ ಕಡಿಮೆ ಮಾಡಲು ಆದೇಶ ಕೊಡಿ: ಶಿಕ್ಷಣ ಸಚಿವರಿಗೆ ಪೋಷಕರ ಆಗ್ರಹ