Publish Date: Fri, 05 Jun 2020 (11:59 IST)
Updated Date: Fri, 05 Jun 2020 (12:01 IST)
ಬೀಜಿಂಗ್: ಜಗತ್ತಿಗೇ ಕೊರೋನಾ ಹರಡಿದ ಕುಖ್ಯಾತಿಗೊಳಗಾಗಿದ್ದ ಚೀನಾದ ವುಹಾನ್ ನಗರ ಈಗ ಸಂಪೂರ್ಣವಾಗಿ ಕೊರೋನಾ ಮುಕ್ತವಾಗಿದ್ದು, ಸುರಕ್ಷಿತವಾಗಿದೆ.
ಕೊನೆಯದಾಗಿ ದಾಖಲಾಗಿದ್ದ ಮೂವರು ಕೊರೋನಾ ಸೋಂಕಿತರೂ ಈಗ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ವುಹಾನ್ ಈಗ ಕೊರೋನಾ ಮುಕ್ತವಾಗಿದೆ ಎಂದು ಅಲ್ಲಿನ ಸ್ಥಳೀಯಾಡಳಿತ ತಿಳಿಸಿದೆ.
ಇದುವರೆಗಾಗಿ ಚೀನಾದಲ್ಲಿ ಕೊರೋನಾ ಪೀಡಿತರ ಸಂಖ್ಯೆ 83,027 ತಲುಪಿದ್ದು, ಈ ಪೈಕಿ 78,327 ಮಂದಿ ಗುಣಮುಖರಾಗಿದ್ದಾರೆ ಎನ್ನಲಾಗಿದೆ.