Publish Date: Fri, 05 Jun 2020 (09:47 IST)
Updated Date: Fri, 05 Jun 2020 (09:49 IST)
ಲಂಡನ್: ಸಾಲ ಮಾಡಿ ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಮದ್ಯದೊರೆ ವಿಜಯ್ ಮಲ್ಯ ಭಾರತಕ್ಕೆ ಹಸ್ತಾಂತರ ಮಾಡಲು ಕಾನೂನಿನ ತೊಡಕು ಎದುರಾಗಲಿದೆ.
ವಿಜಯ್ ಮಲ್ಯ ಗಡೀಪಾರು ಮಾಡುವುದನ್ನು ತಡೆ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಬ್ರಿಟನ್ ಸುಪ್ರೀಂಕೋರ್ಟ್ ಮೇ 14 ರಂದು ತಳ್ಳಿ ಹಾಕಿತ್ತು. ಇದಾದ 28 ದಿನಗಳಲ್ಲಿ ಮಲ್ಯ ಭಾರತಕ್ಕೆ ಗಡೀಪಾರು ಮಾಡಬೇಕಿತ್ತು.
ಆದರೆ ಇದೀಗ ಅವರನ್ನು ಹಸ್ತಾಂತರ ಮಾಡುವುದಕ್ಕೆ ಕೆಲವು ಕಾನೂನು ತೊಡಕುಗಳಿದ್ದು, ಅದು ನಿವಾರಣೆಯಾಗದೇ ಭಾರತಕ್ಕೆ ಹಸ್ತಾಂತರಿಸಲಾಗದು ಎಂದು ಬ್ರಿಟನ್ ರಾಯಭಾರ ಕಚೇರಿಯ ವಕ್ತಾರರು ಹೇಳಿದ್ದಾರೆ.