Daily Horoscope

Select Your Language

Notifications

webdunia
webdunia
webdunia
webdunia

ಭಾರತಕ್ಕೆ ಯಾಕೆ ತೊಂದರೆ ಕೊಡುತ್ತೀರಿ? ಚೀನಾ ವಿರುದ್ಧ ಅಮೆರಿಕಾ ಆಕ್ರೋಶ

ಅಮೆರಿಕಾ-ಚೀನಾ
ನವದೆಹಲಿ: ಕೊರೋನಾ ಹರಡಿದ ಚೀನಾ ಮೇಲೆ ಅಮೆರಿಕಾ ತಿರುಗಿಬಿದ್ದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದರ ನಡುವೆ ಚೀನಾ ಭಾರತದ ಗಡಿಯಲ್ಲಿ ತಕರಾರು ತೆಗೆದಿರುವುದೂ ಅಮೆರಿಕಾ ಕೆಂಗಣ್ಣಿಗೆ ಗುರಿಯಾಗಿದೆ.


ಲಡಾಖ್ ನಲ್ಲಿ ಸೇನೆ ಜಮಾಯಿಸಿ ಭಾರತದ ವಿರುದ್ಧ ಕಾಲು ಕೆರೆಯುತ್ತಿರುವ ಚೀನಾ ವಿರುದ್ಧ ಅಮೆರಿಕಾ ವಿದೇಶಾಂಗ ಸಮಿತಿ ಮುಖ್ಯಸ್ಥ ಎಲಿಯಟ್ ಏಂಜಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿನಾಕಾರಣ ಭಾರತದ ವಿರುದ್ಧ ಯಾಕೆ ಗಡಿ ತಂಟೆ ಮಾಡುತ್ತಿದ್ದೀರಿ? ಅಕ್ರಮಣಕಾರಿ ಹಾದಿ ಬಿಟ್ಟು ರಾಜತಾಂತ್ರಿಕ ದಾರಿಯನ್ನು ನೋಡಿಕೊಳ್ಳಿ ಎಂದು ಎಲಿಯಟ್ ಸಲಹೆ ನೀಡಿದ್ದಾರೆ. ಗಡಿ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಇತ್ತೀಚೆಗೆ ಅಮೆರಿಕಾ ಅಧ‍್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೈಗಾರಿಕೋದ್ಯಮಗಳನ್ನುದ್ದೇಶಿಸಿ ಇಂದು ಪ್ರಧಾನಿ ಮೋದಿಯಿಂದ ಮಹತ್ವದ ಭಾಷಣ