Select Your Language

Notifications

webdunia
webdunia
webdunia
webdunia

ಅನಿಲ್ ಅಂಬಾನಿಗೆ ಎಷ್ಟು ಕೋಟಿ ರೂ. ಗಿಫ್ಟ್ ನೀಡಿದ ಮುಕೇಶ್ ಗೊತ್ತಾ?

dhirubai ambani
mumbai , ಮಂಗಳವಾರ, 19 ಡಿಸೆಂಬರ್ 2023 (14:07 IST)
ತಂದೆ ಧೀರುಭಾಯಿ ಅಂಬಾನಿ ಜನ್ಮದಿನದಂದು ಮುಕೇಶ್ ಅಂಬಾನಿ ತನ್ನ ಸಹೋದರ ಅನಿಲ್ ಅಂಬಾನಿಗೆ ನೀಡಿದ ಉಡುಗೊರೆಯ ಮೊತ್ತ ಕೇಳಿದ್ರೆ ದಂಗಾಗುತ್ತೀರಿ. ಉಡುಗೊರೆಯ ಮೊತ್ತ ಕೇವಲ 23 ಸಾವಿರ ಕೋಟಿ ರೂಪಾಯಿ.
 
ಸಹೋದರ ಅನಿಲ್ ಅಂಬಾನಿ ಸಂಚಾಲಿಕತ್ವದ ರಿಲಯನ್ಸ್ ಕಮ್ಯೂನಿಕೇಶನ್ಸ್ ಸಂಕಷ್ಟವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕಂಪೆನಿಯನ್ನು ಸಂಕಷ್ಟದಿಂದ ಮೇಲಕ್ಕೇತ್ತಲು ಮುಕೇಶ್ ಅಂಬಾನಿ 23 ಸಾವಿರ ಕೋಟಿ ವಹಿವಾಟು ಒಪ್ಪಂದಕ್ಕೆ ಮುಂದಾಗಿದ್ದಾರೆ. 
 
ಅನಿಲ್ ಅಂಬಾನಿ ಸಂಚಾಲಿಕತ್ವದ ರಿಲಯನ್ಸ್ ಕಮ್ಯೂನಿಕೇಶನ್ಸ್ ಸಂಸ್ಥೆ 45 ಸಾವಿರ ಕೋಟಿ ರೂಪಾಯಿ ಸಾಲವನ್ನು ಹೊಂದಿದ್ದು ಬಹುತೇಕ ದಿವಾಳಿ ಹಂತವನ್ನು ತಲುಪಿದೆ ಎನ್ನಲಾಗುತ್ತಿದೆ.
 
ಕಳೆದ 2005ರಲ್ಲಿ ಆಸ್ತಿಯನ್ನು ಹಂಚಿಕೊಂಡ ಮುಕೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ಪ್ರತ್ಯೇಕವಾಗಿ ವಹಿವಾಟು ನಡೆಸುತ್ತಿದ್ದರು. ಅನಿಲ್ ಅಂಬಾನಿ ತಮ್ಮ ಮಹತ್‌ಕಾಂಕ್ಷೆಯ ರಿಲಯನ್ಸ್ ಕಮ್ಯೂನಿಕೇಶನ್ಸ್ ಸಂಸ್ಥೆ ಆರಂಭಿಸಿದ್ದರು. ಇದೀಗ ನಷ್ಟ ಹಿನ್ನೆಲೆಯಲ್ಲಿ  2ಜಿ, 3ಜಿ ಸೇವೆಯನ್ನು ಸ್ಥಗಿತಗೊಳಿಸಿದ್ದರು.   

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಡೆಂಗ್ಯೂ ಅಬ್ಬರ..!