Select Your Language

Notifications

webdunia
webdunia
webdunia
webdunia

ಅಟಲ್ ಪೆನ್ಷನ್ ಯೋಜನೆ (ಎಪಿಐ): ಕೇವಲ 210 ರೂ ತಿಂಗಳ ಹೂಡಿಕೆಯೊಂದಿಗೆ 60 ಸಾವಿರ ಪಿಂಚಣಿ

ಅಟಲ್ ಪೆನ್ಷನ್ ಯೋಜನೆ (ಎಪಿಐ): ಕೇವಲ 210 ರೂ ತಿಂಗಳ ಹೂಡಿಕೆಯೊಂದಿಗೆ 60 ಸಾವಿರ ಪಿಂಚಣಿ
ಬೆಂಗಳೂರು , ಸೋಮವಾರ, 14 ಜನವರಿ 2019 (16:53 IST)
ಕಳೆದ 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಟಲ್ ಪಿಂಚಣಿ ಯೋಜನೆ (ಎಪಿವೈ)ಯನ್ನು ಜಾರಿಗೆ ತಂದಿದ್ದು ಪ್ರತಿ ತಿಂಗಳು 210 ರೂ. ಹೂಡಿಕೆಯ ಯೋಜನೆಯನ್ನು ಪ್ರಾರಂಭಿಸಿದೆ.


ಈ ಯೋಜನೆಯು ಭಾರತದ ಎಲ್ಲಾ ನಾಗರಿಕರಿಗೆ, ಅದರಲ್ಲೂ ನಿರ್ದಿಷ್ಟವಾಗಿ ಯಾವುದೇ ಔಪಚಾರಿಕ ಪಿಂಚಣಿ ಸೌಲಭ್ಯವನ್ನು ಹೊಂದಿರದ ಅಸಂಘಟಿತ ವಲಯಕ್ಕೆ ಪೂರಕವಾಗಲಿದೆ. ಕಾರ್ಮಿಕರ ನಿವೃತ್ತಿಯ ನಂತರದ ದಿನಗಳಿಗಾಗಿ ಯೋಜನೆ ಸುವರ್ಣಾವಕಾಶ ತರಲಿದೆ. ಅಟಲ್ ಪೆನ್ಶನ್ ಯೋಜನೆಯಲ್ಲಿ ಮಾಸಿಕ 1000 ರೂ. ಮತ್ತು ಮಾಸಿಕ 5000 ರೂ.ಗಳ ಲಾಭವನ್ನು ಪಡೆಯಬಹುದಾಗಿದೆ ಎಂದು ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ ವೆಬ್ಸೈಟ್ ವರದಿ ಮಾಡಿದೆ.  
 
ಎಪಿವೈ ಎನ್ಪಿಎಸ್ ಮೂಲಕ ಪಿಎಫ್ಆರ್‌ಡಿಎ ನಿರ್ವಹಿಸುವ ಭಾರತ ಸರಕಾರದ ಯೋಜನೆಯಲ್ಲಿ. ವರ್ಷಕ್ಕೆ ಕೇವಲ 210 ರೂಪಾಯಿ ಹೂಡಿಕೆಯ ಮೂಲಕ, 18 ವರ್ಷದೊಳಗಿನ ಸೇರ್ಪಡೆದಾರರು ನಿವೃತ್ತಿಯ ನಂತರ 60000 ರೂ. ಪಿಂಚಣಿ ಪಡೆಯಬಹುದಾಗಿದೆ.
 
ಅಟಲ್ ಪಿಂಚಣಿ ಯೋಜನೆ - ಖಾತೆ ತೆರೆಯುವುದು ಹೇಗೆ: ಉಳಿತಾಯ ಬ್ಯಾಂಕ್ ಖಾತೆಯನ್ನು ನಿರ್ವಹಿಸುವ ಬ್ಯಾಂಕ್ ಮೂಲಕ ಖಾತೆಗಳನ್ನು ತೆರೆಯಬಹುದು.
 
ಅಟಲ್ ಪಿಂಚಣಿ ಯೋಜನೆ - ಹೂಡಿಕೆ ಎಷ್ಟು ಮಾಡಬಹುದು? ಚಂದಾದಾರರು 18 ನೇ ವಯಸ್ಸಿಗೆ ಸೇರ್ಪಡೆಗೊಳ್ಳುವರು ರೂ. 42 ಮತ್ತು ರೂ. 210 ರಂತೆ ಮಾಸಿಕ ಆಧಾರದಲ್ಲಿ ಕನಿಷ್ಟ ಭರವಸೆಯ ಮಾಸಿಕ ಪಿಂಚಣಿ 1000 ರೂ ಮತ್ತು 5000 ರೂ. ಪಡೆಯಬಹುದಾಗಿದೆ. ಚಂದಾದಾರರ ಉಳಿತಾಯ ಬ್ಯಾಂಕ್ ಖಾತೆಯಿಂದ ಮಾಸಿಕ ಕೊಡುಗೆ ಸ್ವಯಂ ಡೆಬಿಟ್ ಸೌಲಭ್ಯದಿಂದ ಪಾವತಿಸಲ್ಪಡುತ್ತದೆ.
 
ಅಟಲ್ ಪಿಂಚಣಿ ಯೋಜನೆಯ ಕನಿಷ್ಟ ಖಾತರಿ ಮಾಸಿಕ ಪಿಂಚಣಿ: ಚಂದಾದಾರರಿಗೆ 1000 ರಿಂದ 5000 ರವರೆಗೆ ಕನಿಷ್ಠ ಮಾಸಿಕ ಪಿಂಚಣಿ ಮತ್ತು ಚಂದಾದಾರರ ಮರಣದ ನಂತರ ಪತ್ನಿಗೆ(ವರ್ಷಕ್ಕೆ ಗರಿಷ್ಠ ರೂ 60000) ಎಪಿವೈ ನೀಡುವುದನ್ನು ಖಾತರಿಪಡಿಸುತ್ತದೆ. ಇಬ್ಬರ ಮರಣದ ನಂತರ ಕಾರ್ಪಸ್ ಅನ್ನು ನಾಮಿನಿಗಳಿಗೆ ಹಿಂತಿರುಗಿಸಬೇಕಾಗುತ್ತದೆ.
 
ಹೂಡಿಕೆಯ ಅಟಲ್ ಪಿಂಚಣಿ ಯೋಜನೆ ವಿವರ
 
ಎಪಿವೈದಲ್ಲಿ ಮಾಸಿಕ, ತ್ರೈಮಾಸಿಕ ಮತ್ತು ಅರ್ಧ-ವರ್ಷದ ಹೂಡಿಕೆಯನ್ನು ಮಾಡಬಹುದು. ಯೋಜನೆಯ ಆರಂಭದಲ್ಲಿ ಹಣ ಹೂಡಿಕೆ ಮಾಡುವುದರಿಂದ ಗರಿಷ್ಠ ಲಾಭವನ್ನು ಪಡೆಯಬಹುದಾಗಿದೆ.
 
ಅಟಲ್ ಪಿಂಚಣಿ ಯೋಜನೆಗೆ ಚಂದಾದಾರರಾಗುವುದು ಹೇಗೆ?
 
ನೀವು ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು. ಅಕಾಲಿಕ ನಿರ್ಗಮನವನ್ನು 60 ವರ್ಷಗಳ ವಯಸ್ಸಿನ ಮೊದಲು ಅನುಮತಿಸಲಾಗುತ್ತದೆ.
 
ಅಟಲ್ ಪಿಂಚಣಿ ಯೋಜನೆ ಆದಾಯ ತೆರಿಗೆ ಪ್ರಯೋಜನಗಳು:
 
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿಸಿ (1 ಬಿ) ಅಡಿಯಲ್ಲಿ ಅಟಲ್ ಪಿಂಚಣಿ ಯೋಜನೆಯಲ್ಲಿ ಪಾವತಿಸಿದ ಕೊಡುಗೆಗಳಿಗೆ ನೀವು ಆದಾಯ ತೆರಿಗೆ ಪ್ರಯೋಜನವನ್ನು ಪಡೆಯಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಆಪರೇಷನ್ ಕಮಲ ಗಾಸಿಪ್ ಎಂದ ಸಂಸದ!