Webdunia - Bharat's app for daily news and videos

Install App

ಬೈಕ್ ವಲಯದಲ್ಲಿ ಮತ್ತೆ ಮಿಂಚುತ್ತಿದೆ ಹೋಂಡಾ ನವಿ

Webdunia
ಶುಕ್ರವಾರ, 20 ಜುಲೈ 2018 (19:36 IST)
ಭಾರತದ ದ್ವೀಚಕ್ರ ಉದ್ಯಮದಲ್ಲಿ ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ತನ್ನ ನೂತನ ಮಾದರಿಯಾದ ನವಿಯನ್ನು ಮತ್ತೊಮ್ಮೆ ರಿಲಾಂಚ್ ಮಾಡಿದ್ದು ಹೊಸ ಬಗೆಯ ವಿನ್ಯಾಸ ಮತ್ತು ತಂತ್ರಜ್ಞಾನದ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ.

2018 ರ ಈ ಹೊಸ ನವಿ ಸ್ಕೂಟರ್‌ನ ಬೆಲೆಯು ಹಳೆಯ ನವಿಗೆ ಹೋಲಿಸಿದರೆ ರೂ 1991 ಜಾಸ್ತಿಯಾಗಿದ್ದು ಮೂಲಗಳ ಪ್ರಕಾರ ದೆಹಲಿ ಎಕ್ಸ್‌ಶೋ ರೂಂನ ಬೆಲೆಯು ರೂ 44,775 ಆಗಿದೆ ಎಂದು ಹೇಳಲಾಗುತ್ತಿದೆ.
 
2016 ರಲ್ಲಿ ನವಿ ಮೊದಲ ಬಾರಿಗೆ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದ್ದು ಹಳೆಯ ಮಾದರಿಗೆ ಹೋಲಿಸಿದರೆ ಇದರಲ್ಲಿ ಸಾಕಷ್ಟು ಬದಲಾವಣೆಗಳನ್ನು ನಾವು ಕಾಣಬಹುದಾಗಿದೆ.
 
ಇದರಲ್ಲಿ ಹೊಸದಾಗಿ ಪ್ಯೂವಲ್ ಗೇಜ್ ಅನ್ನು ಅಳವಡಿಸಲಾಗಿದ್ದು, ಮುಂಭಾಗದಲ್ಲಿ ಹೆಡ್‌ಲ್ಯಾಂಪ್ ಗಾರ್ಡ್ ಇದು ಹೊಂದಿದೆ. ಅಲ್ಲದೇ ಗ್ರಾಬ್ ರೈಲ್ ಮತ್ತು ಮಿರರ್‌ಗಳು ಸಾಕಷ್ಟು ಬದಲಾವಣೆಯನ್ನು ಹೊಂದಿದ್ದು ಹಿಂಬದಿಯಲ್ಲಿ ಕೆಂಪು ಬಣ್ಣದ ಸಸ್ಪೆನ್ಷನ್ ಅನ್ನು ಇದು ಹೊಂದಿದೆ. ಅಷ್ಟೇ ಅಲ್ಲ ಇದು ಹಲವಾರು ಬಣ್ಣಗಳಲ್ಲಿ ಲಭ್ಯವಿದ್ದು, ರೇಂಜ್ ಗ್ರೀನ್ ಮತ್ತು ಲಡಾಕ್ ಬ್ರೌನ್‌ ಹೆಚ್ಚು ಆಕರ್ಷಕವಾಗಿದೆ.
2018 ರ ಹೋಂಡಾ ನವಿ ಟ್ಯೂಬ್‍‍ಲೆಸ್ ಟಯರ್‌ಗಳು ಸ್ಕೂಟರ್‌ನ ಮೆರಗು ಹೆಚ್ಚಿಸಿದ್ದು, ಪೇಟ್ರಿಯಾಟ್‌ ರೆಡ್, ಷಾಸ್ಟಾ ವೈಟ್‌, ಆರೇಂಜ್, ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿದೆ ಇದರ ಹೊರತಾಗಿ ರೇಂಜ್ ಗ್ರಿನ್ ಹಾಗು ಲದಾಕ್ ಬ್ರೌನ್ ಮಾದರಿಗಳು ಹೆಚ್ಚು ಆಕರ್ಷಕವಾಗಿದೆ. ಇದು 4 ಸ್ಟ್ರೋಕ್ ಎಸ್‌ಐ 109.19 ಸಿಸಿ ಪೆಟ್ರೋಲ್‌ ಇಂಜಿನ್ ಹೊಂದಿದ್ದು 7.8 bhp @ 7000 rpm ಟರ್ಕ್‌ ಶಕ್ತಿಯನ್ನು ಉತ್ಪಾದಿಸುತ್ತದೆ. ಅಷ್ಟೇ ಅಲ್ಲ ಇದರಲ್ಲಿ 81 ಕಿಮೀ ವೇಗದಲ್ಲಿ ಚಲಿಸಬಹುದಾದ ಸಾಮರ್ಥ್ಯವನ್ನು ಇದು ಹೊಂದಿದ್ದು, ಹೈವೇಗೆ ಹೋಲಿಸಿದರೆ 49.61 ಕಿಮೀ ಮತ್ತು ಸಾಮಾನ್ಯ ರಸ್ತೆಯಲ್ಲಿ 37.57 ಕಿಮೀ ಮೈಲೇಜನ್ನು ನವಿ ನೀಡುತ್ತದೆ.
ಅಷ್ಟೇ ಅಲ್ಲ ಮುಂದಿನ ಚಕ್ರ ಮತ್ತು ಹಿಂಭದಿಯ ಚಕ್ರವು ಡ್ರಮ್ ಬ್ರೇಕ್ ಸಿಸ್ಟಂ ಅನ್ನು ಹೊಂದಿದ್ದು, ಸಸ್ಪೆಶನ್‌ನಲ್ಲಿ ಹೈಡ್ರೋಲಿಕ್ ಮಾದರಿಯನ್ನು ಅಳವಡಿಸಲಾಗಿದ್ದು ರೈಡ್ ಮಾಡಲು ಸುಲಭವಾಗಿದೆ.
 
ಇದರ ಮುಂಭಾಗದ ಮತ್ತು ಹಿಂಭಾಗದಲ್ಲಿ ಅಲಾಯ್ ಮಾದರಿಯನ್ನು ಹೊಂದಿದ್ದು, ಸ್ಕೂಟರ್‌ನ ಅಂದವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಒಟ್ಟಿನಲ್ಲಿ ನವಿಯಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಿದ್ದು ಜನರ ಮನಸ್ಸನ್ನು ಸೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಬಹುದು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments