Select Your Language

Notifications

webdunia
webdunia
webdunia
webdunia

ಹೃದಯ ಬಡಿತ ತೋರಿಸುತ್ತೆ ಈ ವಾಚ್....!

ಹೃದಯ ಬಡಿತ ತೋರಿಸುತ್ತೆ ಈ ವಾಚ್....!

ಗುರುಮೂರ್ತಿ

ಬೆಂಗಳೂರು , ಶನಿವಾರ, 24 ಫೆಬ್ರವರಿ 2018 (18:25 IST)
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ವಾಚುಗಳ ಬರಾಟೆ ಜೋರಾಗಿದ್ದು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ ಎಂದೇ ಹೇಳಬಹುದು. ಈ ಎಲ್ಲಾ ಸ್ಮಾರ್ಟ್‌ವಾಚುಗಳು ಸ್ಮಾರ್ಟ್‌ಫೋನ್‌ಗಳಿಗೆ ಬೆಂಬಲವಾಗಿದ್ದು ಇದೀಗ ಈ ಸ್ಮಾರ್ಟ್‌ವಾಚ್ ತಂತ್ರಜ್ಞಾನದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದೆ ಎಂದರೆ ತಪ್ಪಾಗಲಾರದು.
ಈ ಸ್ಮಾರ್ಟ್‌ವಾಚುಗಳನ್ನು ಮೊಬೈಲ್‌ನೊಂದಿಗೆ ಸಂಪರ್ಕ ಹೊಂದಿಸಬಹುದಾಗಿದ್ದು, ಮೊಬೈಲ್‌ನಲ್ಲಿ ಬರುವ ಕರೆಗಳು ಸಂದೇಶಗಳು ಮುಂತಾದವುಗಳನ್ನು ಈ ಸ್ಮಾರ್ಟ್‌ವಾಚ್‌ನಲ್ಲಿ ನಾವು ಕಾಣಬಹುದಾಗಿತ್ತು. ಆದರೆ ಇದೀಗ ಸ್ಮಾರ್ಟ್‌ವಾಚ್‌ ಮಾರಾಟದಲ್ಲಿ ಪೈಫೋಟಿ ಹೆಚ್ಚಾಗಿದ್ದು ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿ ಕಂಪನಿಗಳು ತಮ್ಮ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ.
webdunia
ಇತ್ತೀಚಿಗೆ ಸ್ಮಾರ್ಟ್‌ವಾಚ್ ಉತ್ಪಾದನೆಯನ್ನು ಹಲವು ಕಂಪನಿಗಳು ಬಿಡುಗಡೆ ಮಾಡಿದ್ದು ಫಿಟ್‌ಬಿಟ್ ಎನ್ನುವ ಕಂಪನಿ ತನ್ನ ನೂತನ ಸ್ಮಾರ್ಟ್‌ವಾಚ್‌ ಆದ ಫಿಟ್‌ಬಿಟ್ ಆಯೋನಿಕ್ ಅನ್ನು ಬಿಡುಗಡೆ ಮಾಡುತ್ತಿದೆ. ಇದರಲ್ಲಿ ಆರೋಗ್ಯದ ಕುರಿತಾದ ಅಪ್ಲಿಕೇಶನ್‌ಗಳು ಮತ್ತು ಫಿಟ್‌ನೆಸ್‌ಗೆ ಸಹಾಯಕಾರಿಯಾಗುವಂತಹ ಮಾಹಿತಿಯನ್ನು ಹೊಂದಿರುವ ತಂತ್ರಜ್ಞಾನವನ್ನು ಈ ಸ್ಮಾರ್ಟ್‌ವಾಚ್‌ನಲ್ಲಿ ಅಳವಡಿಸಲಾಗಿದೆ.
webdunia
ಫಿಟ್‌ಬಿಟ್ ಆಯೋನಿಕ್ ಕಂಪನಿ ತನ್ನ ನೂತನ ವಾಚ್‌ ಅನ್ನು ಸಿದ್ಧಪಡಿಸಿದ್ದು ಇನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ವಾಚ್ ಕುರಿತು ಬಾರಿ ಕುತೂಹಲ ಉಂಟಾಗಿದ್ದು ಇದರ ಕುರಿತಾದ ಕಿರು ಮಾಹಿತಿ ನಿಮಗಾಗಿ.
 
ಇದರಲ್ಲಿ ಚಿಕ್ಕದಾದ ಸ್ಪರ್ಶ ಪರದೆಯಿದ್ದು ಆರೋಗ್ಯದ ಕುರಿತಾದ ಫೀಟ್‌ನೆಸ್ ವಿಷಯಗಳನ್ನು ಇದರಲ್ಲಿ ಸುಲಭವಾಗಿ ತಿಳಿಯಬಹುದಾಗಿದೆ. ಅಷ್ಟೇ ಅಲ್ಲ ಇದರಲ್ಲಿ ಆಂತರಿಕ ಜಿಪಿಎಸ್ ತಂತ್ರಜ್ಞಾನವನ್ನು ಅಳವಡಿಸಿದ್ದು ನಿಮ್ಮ ಸ್ಥಳದ ಮಾಹಿತಿ ಮತ್ತು ಹವಾಮಾನದ ಮಾಹಿತಿಯನ್ನು ಪಡೆಯಬಹುದು. ಇದರಲ್ಲಿ ಹೃದಯ ಬಡಿತದ ಸೆನ್ಸಾರ್‌ ಕೂಡಾ ಇದ್ದು ನಿಮ್ಮ ಹೃದಯದ ಕುರಿತಾದ ಮಾಹಿತಿಯನ್ನು ಇದು ತಿಳಿಸುತ್ತದೆ. ಇದರಲ್ಲಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬಹುದಾಗಿದ್ದು, ಸುಮಾರು 300 ಹಾಡುಗಳನ್ನು ಈ ಸ್ಮಾರ್ಟ್‌ವಾಚ್‌ನಲ್ಲಿ ಸಂಗ್ರಹಿಸಬಹುದಾಗಿದೆ. ಇದರಲ್ಲಿ ವಾಚ್ ಫೇಸಸ್‌ಗಳನ್ನು ಬದಲಾಯಿಸಿಕೊಳ್ಳಬಹುದಾಗಿದ್ದು, ಬ್ಲೂಟೂತ್ ಸಂಪರ್ಕವನ್ನು ಇದು ಹೊಂದಿದೆ.
webdunia
ಇದು ಜನ ನಿರೋಧಕವಾಗಿದ್ದು ಇದನ್ನು ಸ್ವಿಮ್ಮಿಂಗ್ ಮುಂತಾದ ಚಟುವಟಿಕೆಗಳನ್ನು ಮಾಡುವಾಗಲು ಬಳಸಬಹುದಾಗಿದೆ. ಅಲ್ಲದೇ ರನ್ನಿಂಗ್, ಸ್ಕಿಪಿಂಗ್ ಮಾಡುವಾಗ ಎಷ್ಟು ಕ್ಯಾಲರಿ ಫ್ಯಾಟ್ ಕಡಿಮೆ ಆಗಿದೆ ಎಂಬುದನ್ನು ಸಹ ಇದು ಸೂಚಿಸುತ್ತದೆ. ಇನ್ನು ಇದರಲ್ಲಿರುವ ಸೆನ್ಸಾರ್‌ಗಳ ಕುರಿತು ಹೇಳುವುದಾದರೆ 3-ಎಕ್ಸ‌ಸ್ ಅಕ್ಸೆಲೆರೊಮೀಟರ್, 3-ಎಕ್ಸ‌ಸ್ ಗೈರೊಸ್ಕೋಪ್, ಆಪ್ಟಿಕಲ್ ಹಾರ್ಟ್ ರೇಟ್ ಸೆನ್ಸಾರ್‌, ಆಲ್ಟಿಮೀಟರ್, ಆಂಬಿಯಂಟ್ ಲೈಟ್ ಸೆನ್ಸರ್, ವೈಬ್ರೇಶನ್ ಮೋಟರ್ ಹಾಗೂ NFC ಅನ್ನು ಇದು ಒಳಗೊಂಡಿದೆ.
 
ಇದು ಐಫೋನ್ ಮತ್ತು ಆಂಡ್ರೊಯ್ಡ್ ಸ್ಮಾರ್ಟ್‌ಫೋನ್‌ ಎರಡಕ್ಕೂ ಬೆಂಬಲಿಸುತ್ತದೆ. ಇದು Fitbit OS ಆಫರೇಟಿಂಗ್ ಸಿಸ್ಟಂ ಮೂಲಕ ಕಾರ್ಯ ನಿರ್ವಹಿಸುತ್ತದೆ. ಮತ್ತು ಆಂಡ್ರೊಯ್ಡ್ ಮತ್ತು IOS ಆಪರೇಟಿಂಗ್ ಸಿಸ್ಟಂಗಳಿಗೆ ಹೊಂದಿಕೆಯಾಗುತ್ತದೆ. ಇದರಲ್ಲಿ ನೋಟಿಫಿಕೇಶನ್ ಸಿಸ್ಟಂ ಅನ್ನು ಅಳವಡಿಸಿದ್ದು, ನಿಮ್ಮ ಕ್ಯಾಲೆಂಡರ್ ಅಲರ್ಟ್‌ಗಳು, ಪಠ್ಯ ಸಂದೇಶದ ಅಲೆರ್ಟ್‌ಗಳನ್ನು ಕಾಣಬಹುದಾಗಿದೆ. ಅಲ್ಲದೇ ನಿಮ್ಮ ಮೊಬೈಲ್‌ಗೆ ಬರುವಂತ ಸಂದೇಶಗಳನ್ನು ಇದರಲ್ಲೇ ವೀಕ್ಷಿಸಬಹುದು. ಇದರಲ್ಲಿ ಲಿಥೀಯಮ್ ಪೊಲಿಮೆರ್ ಬ್ಯಾಟರಿಯನ್ನು ಹೊಂದಿದ್ದು ಸಾಮಾನ್ಯವಾಗಿ ಬಳಸಿದಲ್ಲಿ 6 ದಿನಗಳ ಕಾಲ ಬಾಳಿಕೆ ಬರುತ್ತದೆ ಎಂದು ಕಂಪನಿ ತಿಳಿಸಿದೆ. ಇದು ರೀಚಾರ್ಜೆಬಲ್ ಬ್ಯಾಟರಿ ಆಗಿದ್ದು, ನೀವು ಸುಲಭವಾಗಿ ಇದನ್ನು ಚಾರ್ಜ್ ಮಾಡಬಹುದಾಗಿದೆ.
 
ಇದರ ವಾಚ್‌ಗಳು 3 ಬಣ್ಣಗಳಲ್ಲಿ ಲಭ್ಯವಿದ್ದು ಲೆದರ್ ಬೆಲ್ಟ್‌ಗಳು ಮತ್ತು ಸ್ಪೋರ್ಟ್ ಮಾದರಿಯ ಬೆಲ್ಟುಗಳಲ್ಲಿ ಇದು ಲಭ್ಯವಿದೆ. ಈ ಸ್ಮಾರ್ಟ್‌ವಾಚ್ ಬೆಲೆ 21000 ಎಂದು ಅಂದಾಜಿಸಲಾಗಿದ್ದು ಮೂಲಗಳ ಪ್ರಕಾರ ಮುಂದಿನ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸರ್ಕಾರದ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇವೆ– ಹೆಬ್ಬಾಳಕರ್